ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ | ಇಂಧನ ಬೆಲೆ 150ರ ಗಡಿದಾಟುತ್ತಾ?
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಜನರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ದಿನ ಬಿಟ್ಟು ಒಂದು ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗುತ್ತಿದ್ದು, ಬೆಲೆ ಏರಿಕೆಯ ಓಟ ಮುಂದುವರಿದಿದೆ.
ಶುಕ್ರವಾರ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ, ಆದರೆ, ಶನಿವಾರದಿಂದ ಮತ್ತೆ ಬೆಲೆ ಏರಿಕೆ ಮಾಡಲಾಗಿದೆ. ಪೆಟ್ರೋಲ್ ದರ ಪ್ರತಿ ಲೀಟರ್ ಗೆ 34 ರಿಂದ 43 ಪೈಸೆಯಷ್ಟು ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 28 ರಿಂದ 36 ಪೈಸೆಯಷ್ಟು ಹೆಚ್ಚಳ ಕಂಡಿದೆ.
ದರ ಪರಿಷ್ಕರಣೆಯಾಗಿ ಇಂಧನ ದರ ಏರಿಕೆಯಾಗುವುದರೊಂದಿಗೆ ದೇಶಾದ್ಯಂತ ಬಹುತೇಕ ಎಲ್ಲ ಭಾಗದಲ್ಲಿ ಪೆಟ್ರೋಲ್ ದರ ಶತಕದ ಗಡಿ ದಾಟಿದೆ. ತಜ್ಞರ ಪ್ರಕಾರ ಪೆಟ್ರೋಲ್ ಬೆಲೆ 150ರ ಗಡಿದಾಟುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗುತ್ತಿದೆ.
ಸದ್ಯ ದೆಹಲಿಯಲ್ಲಿ ಪೆಟ್ರೋಲ್ 100.91 ರೂ., ಡೀಸೆಲ್ 89.88 ರೂ. ಆಗಿದ್ದು, ಕೊಲ್ಕತ್ತಾದಲ್ಲಿ ಪೆಟ್ರೋಲ್ 101.01 ರೂ., ಡೀಸೆಲ್ 92.97 ರೂ. ಆಗಿದೆ. ಮುಂಬೈನಲ್ಲಿ ಪೆಟ್ರೋಲ್ 106.93 ರೂ., ಡೀಸೆಲ್ 97.46 ರೂ. ಮತ್ತು ಬೆಂಗಳೂರಿನಲ್ಲಿ ಪೆಟ್ರೋಲ್ 104.29 ರೂ., ಡೀಸೆಲ್ 95.26 ರೂ. ಆಗಿದೆ.
ಶಾಕಿಂಗ್ ನ್ಯೂಸ್: ಪೆಟ್ರೋಲ್, ಡೀಸೆಲ್ ಬೆಲೆ 150ರ ಗಡಿದಾಟುವ ಸಾಧ್ಯತೆ!