ಭಾರತೀಯರಿಗೆ ಶಾಕಿಂಗ್ ನ್ಯೂಸ್ | ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ
ನವದೆಹಲಿ: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಎರಡು ತಿಂಗಳ ಬಳಿವಾದರೂ ಪೆಟ್ರೋಲ್ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಪೆಟ್ರೋಲ್ ಬೆಲೆ ಸದ್ಯಕ್ಕೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಮಂಗಳವಾರ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ.
ಪೆಟ್ರೋಲ್ ಪ್ರತಿ ಲೀಟರ್‌ಗೆ 19 ರಿಂದ 25 ಪೈಸೆಗಳಷ್ಟು ದುಬಾರಿಯಾಗಿದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 24 ರಿಂದ 27 ಪೈಸೆ ಹೆಚ್ಚಾಗಿದೆ. ಇಂಧನ ಬೆಲೆಗಳು ಭಾರತದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿವೆ. ಒಂದು ಲೀಟರ್ ಪೆಟ್ರೋಲ್ 107.47 ರೂ. ತಲುಪಿದ್ದ ನಂತರ ಇತ್ತೀಚಿನ ಬೆಲೆ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಪೆಟ್ರೋಲ್ ಚಿಲ್ಲರೆ ಬೆಲೆ ಪ್ರತಿ ಲೀಟರ್‌ಗೆ 101.39 ರೂ.ಗೆ ಇಳಿದಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ ಜುಲೈ 17 ರ ನಂತರ ಪೆಟ್ರೋಲ್ ಬೆಲೆಯಲ್ಲಿ ಮೊದಲ ಹೆಚ್ಚಳವಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 101.87 ರೂ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಪ್ರತಿ ಲೀಟರ್ ಗೆ 99.15 ರೂ. ಇದೆ. ಡೀಸೆಲ್ ಬೆಲೆ ಮಂಗಳವಾರ ಏರಿಕೆ ಕಂಡಿದ್ದು, ಕಳೆದ ವಾರದಿಂದ ನಾಲ್ಕನೇ ಬಾರಿ ದರ ಹೆಚ್ಚಳವಾಗಿದೆ.
ಮಹಾರಾಷ್ಟ್ರದ ರಾಜಧಾನಿಯಲ್ಲಿ ಒಂದು ಲೀಟರ್ ಡೀಸೆಲ್ ಬೆಲೆ 97.21 ರೂ. ದೆಹಲಿಯಲ್ಲಿ 89.57 ರೂ., ಕೊಲ್ಕತ್ತಾದಲ್ಲಿ 92.67 ರೂ. ಮತ್ತು ಚೆನ್ನೈನಲ್ಲಿ ಪ್ರತಿ ಲೀಟರ್‌ಗೆ 94.17 ರೂ. ಇದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಮದುವೆ ದಿನ ಮಂಟಪದಿಂದ ಕಾರಿನಲ್ಲಿ ತೆರಳುವಾಗ ಜೋರಾಗಿ ಅತ್ತ ವರ!
ಸಮನ್ಸ್ ನೀಡಲು ಬಂದ ಪೊಲೀಸ್ ಕಾನ್ ಸ್ಟೇಬಲ್ ನಿಂದ ಬಾಲಕಿಯ ಅತ್ಯಾಚಾರ
ಶಾಕಿಂಗ್ ನ್ಯೂಸ್: ಸೈಬರ್ ಸೆಂಟರ್ ನಲ್ಲಿ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ
ಹೌದು ಇದು ಶೋಷಿತ ಜನರಿಂದ ಪ್ರಾಯೋಜಿತ ಮುಷ್ಕರ !
ಜೆಡಿಎಸ್ ನ್ನು ಸಿದ್ದರಾಮಯ್ಯ ಮಾತ್ರವಲ್ಲ, ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ | ಹೆಚ್.ಡಿ.ದೇವೇಗೌಡ ಗುಡುಗು
ಶಾಕಿಂಗ್ ನ್ಯೂಸ್: ಏಕಾಏಕಿ ಕುಸಿದು ಬಿದ್ದ ಮೂರು ಅಂತಸ್ತಿನ ಬೃಹತ್ ಕಟ್ಟಡ
ಗರ್ಭಿಣಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ರೈಲ್ವೆ ಹಳಿಯಲ್ಲಿ ಎಸೆದು ಹೋದ ಕಾಮುಕರು