ಏರ್ ಪೋರ್ಟ್ ನಲ್ಲಿ  ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಟಾಕ್ಸಿ ಚಾಲಕ ಆತ್ಮಹತ್ಯೆ

kempegowda airport
31/03/2021

ಬೆಂಗಳೂರು: ಕೆಂಪೇಗೌಡ ಏರ್ ಪೋರ್ಟ್ ನಲ್ಲಿ  ಟಾಕ್ಸಿ ಚಾಲಕನೋರ್ವ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಟಾಕ್ಸಿ ಚಾಲಕ ಮೃತಪಟ್ಟಿದ್ದಾನೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಚನ್ನಪಟ್ಟಣ ಮೂಲದ 32 ವರ್ಷ ವಯಸ್ಸಿನ ಯುವಕ ಪ್ರತಾಪ್‌ ಕುಮಾರ್‌ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.

ಲಾಕ್ ಡೌನ್  ಬಳಿಕ ಬಾಡಿಗೆ ದರ ಕಡಿಮೆಯಾಗಿದ್ದು, ಬಾಡಿಗೆ ಕೂಡ ದೊರೆಯುತ್ತಿರಲಿಲ್ಲ. ಈ ನಡುವೆ ಪೆಟ್ರೋಲ್, ಡೀಸೆಲ್ ದರವೂ ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಜೀವನ ನಿರ್ವಹಣೆ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಪ್ರತಾಪ್‌ ಕುಮಾರ್‌  ಏರ್‌ಪೋರ್ಟ್ ಸಮೀಪ ಟ್ಯಾಕ್ಸಿಯಲ್ಲಿಯೇ ಕುಳಿತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಬೆಂಕಿ ನಂದಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕಾರು ಮಗುಚಿ ಬಿದ್ದು, ಪತಿ ಮತ್ತು ಮೂವರು ಮಕ್ಕಳ ಕಣ್ಣೆದುರೇ ಸಾವಿಗೀಡಾದ ಮಹಿಳೆ!

ಇತ್ತೀಚಿನ ಸುದ್ದಿ

Exit mobile version