ಪಿಎಫ್ ಐ ಭಯೋತ್ಪಾದಕ ಚಟುವಟಿಕೆಗಳಿಗೆ ತರಬೇತಿ ನೀಡುವ ಸಂಸ್ಥೆ: ಶೋಭಾ ಕರಂದ್ಲಾಜೆ - Mahanayaka

ಪಿಎಫ್ ಐ ಭಯೋತ್ಪಾದಕ ಚಟುವಟಿಕೆಗಳಿಗೆ ತರಬೇತಿ ನೀಡುವ ಸಂಸ್ಥೆ: ಶೋಭಾ ಕರಂದ್ಲಾಜೆ

shobha karandlaje
30/09/2022

ಉಡುಪಿ: ಪಿ ಎಫ್ ಐ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಪಿಎಫ್ ಐ ಭಯೋತ್ಪಾದಕ ಚಟುವಟಿಕೆಗಳಿಗೆ ತರಬೇತಿ ನೀಡುವ ಸಂಸ್ಥೆಯಾಗಿದ್ದು,  ಪಿ ಎಫ್ ಐ ಹಿಂದೂ ಯುವಕರ ಕೊಲೆಯಲ್ಲಿ ಭಾಗಿಯಾಗಿದೆ. ಈ ಬಗ್ಗೆ ಎನ್ ಐ ಎ ಮೂರು ವರ್ಷ ಸಾಕ್ಷ್ಯ, ದಾಖಲೆ ಸಂಗ್ರಹಿಸಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದರು.


Provided by

ಎಸ್ ಡಿ ಪಿ ಐ ಮೇಲೆ ಕ್ರಮ ಕೈಗೊಳ್ಳಬೇಕಾದ್ದು ಚುನಾವಣಾ ಆಯೋಗ. ಎಸ್ ಡಿ ಪಿ ಐ ನಲ್ಲಿರುವ ಪಿ ಎಫ್ ಐ ಕಾರ್ಯಕರ್ತರ ತನಿಖೆಯಾಗುತ್ತಿದೆ. ಆಸ್ತಿ ಮುಟ್ಟುಗೋಲುಗೆ ಗೃಹಇಲಾಖೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದೆ. ದೇಶಾದ್ಯಂತ ಜಿಲ್ಲಾಧಿಕಾರಿಗಳು ಈ ಕೆಲಸ ಮಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಬಾಂಬ್ ತಯಾರಿಕೆ, ಶಸ್ತ್ರಾಸ್ತ್ರ ಬಳಕೆ ಬಗ್ಗೆ ಪಿ ಎಫ್ ಐ ತರಬೇತಿ ನೀಡುತ್ತಿತ್ತು. ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಮಾಡುತ್ತಿತ್ತು. ಶಿವಮೊಗ್ಗದಲ್ಲಿ ಮೂವರು ಇಂಜಿನಿಯರ್ ಗಳ ಬಂಧನದ ನಂತರ ಈ ಮಾಹಿತಿ ಸಿಕ್ಕಿದೆ. ತುಂಗಾ ನದಿ ತೀರದಲ್ಲಿ ಬಾಂಬು ಪ್ರಯೋಗ ಯಶಸ್ವಿ ಆದಾಗ ರಾಷ್ಟ್ರಧ್ವಜ ಅರ್ಧ ಸುಟ್ಟು ಸಂಭ್ರಮಿಸಿದ್ದಾರೆ.  ಭಾರತವನ್ನು ದುರ್ಬಲಗೊಳಿಸುವುದು ಪಿ ಎಫ್ ಐ ಉದ್ದೇಶವಾಗಿತ್ತು ಎಂದು ಆರೋಪಿಸಿದ ಅವರು, ಭಾರತದ ಎಲ್ಲಾ ಸವಲತ್ತು ಪಡೆದು ದೇಶದ ವಿರುದ್ಧ ಇರುವವರ ಮಾನಸಿಕತೆ ಬದಲಾಗಬೇಕು ಎಂದರು.


Provided by

ಆರ್ ಎಸ್ ಎಸ್ ಬ್ಯಾನ್ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ ಅವರು,  ಕಾಂಗ್ರೆಸ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ. ದೋಣಿಗೆ ನಾವಿಕನಿಲ್ಲದ ಪಕ್ಷ ಕಾಂಗ್ರೆಸ್ ಆಗಿದ್ದು,  ಅಸ್ತಿತ್ವ ಕಳೆದುಕೊಳ್ಳುವ ಭಯದಲ್ಲಿದೆ. ಆರ್ ಎಸ್ ಎಸ್ ನ್ನು ಬ್ಯಾನ್ ಮಾಡಿದ ಇಂದಿರಾಗಾಂಧಿಯನ್ನು ಜನ ಸೋಲಿಸಿದ್ದರು ಆರ್ ಎಸ್ ಎಸ್ ಯಾವ ದೇಶದ್ರೋಹಿ ಚಟುವಟಿಕೆ ಮಾಡಿದೆ? ಒಂದು ಬಾರಿ ಆರ್ ‌ಎಸ್ ‌ಎಸ್ ಶಾಖೆ ಗೆ ಭೇಟಿ ಕೊಡಿ, ಮುಸಲ್ಮಾನರನ್ನು ಓಲೈಸಲು ಈ ರೀತಿ ಹೇಳಿಕೆ ಕೊಡಬೇಡಿ ಎಂದು ಕಿಡಿಕಾರಿದರು.

ಕರ್ನಾಟಕವನ್ನು ಪಿಎಫ್ ಐ ಫೈನಾನ್ಸಿಯಲ್ ಹಬ್ ಮಾಡಿದ್ದು ಸಿದ್ದರಾಮಯ್ಯ ಆರ್ ಎಸ್ ಎಸ್ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ ಅರ್ಹತೆ ಕಾಂಗ್ರೆಸ್ ಗೆ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ