ರಾಜ್ಯಾದ್ಯಂತ ಪಿಎಫ್ ಐ ಮುಖಂಡರ ಮೇಲೆ ದಾಳಿ ಬಗ್ಗೆ ಯು.ಟಿ.ಖಾದರ್ ಪ್ರತಿಕ್ರಿಯೆ
ಮಂಗಳೂರು: ರಾಜ್ಯಾದ್ಯಂತ ಪಿಎಫ್ ಐ ಕಾರ್ಯಕರ್ತರನ್ನು ವಶಕ್ಕೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿದರು.
ಸಮಾಜದಲ್ಲಿ ಅಶಾಂತಿ ಮತ್ತು ದ್ವೇಷ ಸೃಷ್ಟಿಸಿದ್ರೆ ಕ್ರಮ ಆಗಬೇಕು. ಅಂತಹ ಯಾವುದೇ ಸಂಘಟನೆ ವಿರುದ್ದ ಕ್ರಮಕ್ಕೆ ಎಲ್ಲಾ ಧರ್ಮದ ಸಹಮತ ಇದೆ. ಕಾನೂನು ಕೈಗೆತ್ತಿಕೊಳ್ಳುವವರನ್ನ ಹದ್ದುಬಸ್ತಿನಲ್ಲಿಡೋದು ಸರ್ಕಾರದ ಜವಾಬ್ದಾರಿ ಶಾಂತಿ ಸೌಹಾರ್ದದ ವಾತಾವರಣ ಸರ್ಕಾರ ನಿರ್ಮಾಣ ಮಾಡಬೇಕು. ಆದರೆ, ಯಾವುದೇ ತಾರತಮ್ಯ ಮಾಡದೇ ಸರ್ಕಾರ ಕ್ರಮ ತೆಗೆದುಕೊಳ್ಳಲಿ ಎಂದು ಅವರು ಹೇಳಿದರು.
ಎಲ್ಲರಿಗೂ ಒಂದೇ ರೀತಿಯ ನ್ಯಾಯ ಕೊಟ್ಟರೆ ಎಲ್ಲರೂ ಬೆಂಬಲಿಸ್ತಾರೆ. ನಿರಪರಾಧಿಗಳಿಗೆ ಅನ್ಯಾಯ ಆಗದಿದ್ರೆ ಸರ್ಕಾರವನ್ನ ಎಲ್ಲರೂ ಬೆಂಬಲಿಸ್ತಾರೆ. ನಮ್ಮ ರಾಜ್ಯದಲ್ಲಿ ಧಾರ್ಮಿಕ ಗುರುಗಳು, ಉಲೇಮಾಗಳು ಈ ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ. ಯಾವುದೇ ಧಾರ್ಮಿಕ ಗುರುಗಳು ಈ ದಾಳಿ ಬಗ್ಗೆ ಅಪಸ್ವರ ಎತ್ತಿದ್ದಾರಾ? ನಮ್ಮ ಧರ್ಮದ ಜೊತೆ ಎಲ್ಲಾ ಧರ್ಮ ನ್ಯಾಯಯುತ ತನಿಖೆಗೆ ಬೆಂಬಲ ಕೊಡುತ್ತದೆ. ತಾರತಮ್ಯ ಮತ್ತು ಅನ್ಯಾಯ ಯಾರಿಗೂ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಯಾವ ಸಂಸ್ಥೆ ಬ್ಯಾನ್ ಮಾಡಬೇಕು ಅನ್ನೋದು ತನಿಖೆಯಲ್ಲಿ ಗೊತ್ತಾಗುತ್ತೆ. ಆದರೆ ಎಲ್ಲಾ ಸಂಘಟನೆಗಳಿಗೂ ಸಮಾನತೆಯ ಕಾನೂನು ತನ್ನಿ. ದ್ವೇಷಾಧರಿತ ಮತ್ತು ಗಲಭೆ ಸೃಷ್ಟಿಸುವ ಕೆಲಸ ಆಗಿದ್ದರೆ ಎಲ್ಲಾ ಸಂಘಟನೆಗಳಿಗೂ ಒಂದೇ ಕಾನೂನು ತನ್ನಿ ಎಂದು ಅವರು ಇದೇ ವೇಳೆ ಒತ್ತಾಯಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka