ಫೋನ್ ಕರೆಯನ್ನು ನಂಬಿ 34 ಲಕ್ಷ ರೂ. ಕಳೆದುಕೊಂಡ ಹೆಡ್ ಕಾನ್ ಸ್ಟೇಬಲ್ ! - Mahanayaka
11:06 AM Thursday 12 - December 2024

ಫೋನ್ ಕರೆಯನ್ನು ನಂಬಿ 34 ಲಕ್ಷ ರೂ. ಕಳೆದುಕೊಂಡ ಹೆಡ್ ಕಾನ್ ಸ್ಟೇಬಲ್ !

18/01/2021

ಬಳ್ಳಾರಿ: ಫೋನ್ ಕರೆಯನ್ನು ನಂಬಿ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಒಬ್ಬರು 34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಫೋನ್ ಕರೆಗಳನ್ನು ನಂಬಬೇಡಿ ಎಂದು ಎಚ್ಚರಿಕೆ ನೀಡುವ ಪೊಲೀಸ್ ಇಲಾಖೆಯಲ್ಲಿಯೇ ಕೆಲಸ ಮಾಡುವ ಕಾನ್ಸ್ ಸ್ಟೇಬಲ್ ವೊಬ್ಬರು ಮೋಸಕ್ಕೊಳಗಾದರೆ, ಇನ್ನು ಜನಸಾಮಾನ್ಯರ ಪಾಡೇನು ಎಂಬ ಪ್ರಶ್ನೆಗಳು ಈ ಘಟನೆಯ ಬೆನ್ನಲ್ಲೇ ಕೇಳಿ ಬಂದಿದೆ.

ಬಳ್ಳಾರಿ ಜಿಲ್ಲೆಯ ಸಶಸ್ತ್ರ ಮೀಸಲು ಪಡೆಯಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ  43 ವರ್ಷದ ಆರೋಗ್ಯಪ್ಪರವರನ್ನು ವರ್ಷಕ್ಕೆ ಶೇ.2ರಷ್ಟು ಬಡ್ಡಿದರದಲ್ಲಿ  ಹೌಸಿಂಗ್ ಲೋನ್ ನೀಡುವುದಾಗಿ ನಂಬಿಸಿ ವಂಚಿಸಲಾಗಿದೆ.

ಸಂಜಯ್ ಶರ್ಮ ಎಂಬಾತ ಲೋನ್ ಕೊಡಿಸುವುದಾಗಿ ಕರೆ ಮಾಡಿದ್ದಾನೆ.  ಆ ಬಳಿಕ ಲೋನ್ ಬಗ್ಗೆ ರಾಜಸ್ಥಾನದಿಂದ ಕಂಪೆನಿಯೊಂದರಿಂದ ಕವಿತಾದೇವಿ ಎಂಬ ಹೆಸರಿನಲ್ಲಿ ಪರಿಚಯ ಮಾಡಿಸಿಕೊಂಡ ಮಹಿಳೆ 50 ಲಕ್ಷ ರೂ. ಹೌಸಿಂಗ್ ಲೋನ್ ಬಗ್ಗೆ ಕಥೆ ಹೇಳಿದ್ದಾಳೆ. ಇದಕ್ಕಾಗಿ ಆರೋಗ್ಯಪ್ಪನವರಿಂದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ಇತರ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ಆ ಬಳಿಕ ಅಡ್ವಕೇಟ್, ಶ್ಯೂರಿಟಿ ಮೊದಲಾದ ಕಾರಣಗಳನ್ನು ಹೇಳಿ ಆರೋಗ್ಯಪ್ಪನವರಿಂದ 34 ಲಕ್ಷ ರೂಪಾಯಿ ದೂಚಿದ್ದಾರೆ. ಆರೋಗ್ಯಪ್ಪನವರು ಹಣ ಎಲ್ಲ ಕಳುಹಿಸಿದ ಬಳಿಕ ಆ ನಂಬರ್ ಗೆ ಕರೆ ಮಾಡಿದ್ದು, ಆದರೆ ಆ ನಂಬರ್ ಸ್ವಿಚ್ ಆಫ್ ಆಗಿದೆ. ಈ ವೇಳೆ ತಾನು ಮೋಸ ಹೋಗಿದ್ದೇನೆ ಎಂದು ಅವರಿಗೆ ಅರಿವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿ ನಗರ ಸೈಬರ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ದುರಾಸೆಗೆ ಬಿದ್ದು, ಫೋನ್ ಕರೆಗಳನ್ನು ನಂಬಿ ಯಾರಿಗೂ ಹಣ ನೀಡಬೇಡಿ ಎಂದು ಸಾರಿ ಸಾರಿ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದೆ. ಅದೇ ಇಲಾಖೆಯಲ್ಲಿ ಕೆಲಸ ಮಾಡುವ ಹೆಡ್ ಕಾನ್ ಸ್ಟೇಬಲ್ ವೊಬ್ಬರು 34 ಲಕ್ಷ ರೂಪಾಯಿ ಕಣ್ಣು ಮುಚ್ಚಿಕೊಂಡು ಯಾರಿಗೋ ನೀಡಿ ಇದೀಗ ದೂರು ನೀಡಿದ್ದಾರೆ ಎಂಬ ಮಾತುಗಳು ಇದೀಗ ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ