ಪದೇ ಪದೇ ಫೋನ್ ಮಾಡಿದ್ದಕ್ಕೆ ಬ್ಯಾಂಕ್ ಗೆ ನುಗ್ಗಿ ಅಧಿಕಾರಿಗೆ ಥಳಿಸಿದ ಗ್ರಾಹಕರು!
ಪದೇ ಪದೇ ಫೋನ್ ಮಾಡಿ ಕಿರಿಕಿರಿ ಉಂಟು ಮಾಡಿದ ಬ್ಯಾಂಕ್ ಅಧಿಕಾರಿಗೆ ಇಬ್ಬರು ಗ್ರಾಹಕರು ಬ್ಯಾಂಕ್ ಗೆ ನುಗ್ಗಿ ಥಳಿಸಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಬ್ಯಾಂಕ್ ಆಫ್ ಇಂಡಿಯಾದ ನಾಡಿಯಾಡ್–ಕಪದ್ವಾಂಜ್ ಶಾಖೆಯಲ್ಲಿ ಗೃಹ ಸಾಲ ವಿಭಾಗದ ಅಧಿಕಾರಿಯಾಗಿರುವ ಮನೀಶ್ ಧಂಗರ್ ಹಲ್ಲೆಗೊಳಗಾದವರಾಗಿದ್ದಾರೆ. ಇದೇ ಬ್ಯಾಂಕ್ ನ ಗ್ರಾಹಕರಾದ ಸಮರ್ಥ ಬ್ರಹ್ಮಭಟ್ ಮತ್ತು ಆತನ ಸ್ನೇಹಿತ ಪಾರ್ಥ ಸೇರಿ ಹಲ್ಲೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ಗ್ರಾಹಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಧಿಕಾರಿ ತನ್ನ ಕುರ್ಚಿಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಇಬ್ಬರು ಗ್ರಾಹಕರು ಅಧಿಕಾರಿಯನ್ನು ಹಿಡಿದುಕೊಂಡು ಹಿಗ್ಗಾಮುಗ್ಗಾ ಥಳಿಸಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಮಾ ಪಾಲಿಸಿಯ ಪ್ರತಿಯನ್ನು ಕೊಡುವಂತೆ ನಾವು ಬ್ಯಾಂಕ್ ನಿಂದ ಕರೆ ಮಾಡಿದ್ದೆವು, ಅವರು ಕೊಡದ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಕರೆ ಮಾಡಲಾಗಿತ್ತು. ಇಷ್ಟಕ್ಕೆ ಬ್ಯಾಂಕ್ ಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಅಧಿಕಾರಿ ಧಂಗರ್ ನೋವು ತೋಡಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw