ಫೋಟೋ ಶೂಟ್ ಗೆ ಪೋಸ್ ನೀಡಿದ ತುಂಬು ಗರ್ಭಿಣಿ ಮಯೂರಿ

08/03/2021

ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಜನ ಮನ್ನಣೆಗಳಿಸಿ, ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟ ನಟಿ ಮಯೂರಿ ಇತ್ತೀಚೆಗೆ ವಿವಾಹವಾಗಿದ್ದರು. ಇದೀಗ ಅವರು ಗರ್ಭಿಣಿಯಾಗಿದ್ದು, ಈ ಸಂದರ್ಭದಲ್ಲಿ ಅವರು  ಫೋಟೋ ಶೂಟ್ ನಡೆಸಿದ್ದಾರೆ.

ಮಯೂರಿ ಅವರು ಗರ್ಭಿಣಿಯಾಗಿದ್ದಲ್ಲಿಂದ, ಫೋಟೋ ಶೂಟ್  ನಡೆಸುತ್ತಿದ್ದಾರೆ.  ಬೇಬಿ ಬಂಪ್ ತೋರಿಸುತ್ತಾ ಅವರು, ಫೋಟೋಗಳಿಗೆ ಪೋಸ್ ನೀಡಿರುವ ಫೋಟೋಗಳನ್ನು ತಮ್ಮ ಇನ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಪೊಗರು ಚಿತ್ರದಲ್ಲಿ ಅಭಿನಯಿಸಿದ್ದ ಮಯೂರಿ ಅವರ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹೊಸ ತನಗಳೊಂದಿಗೆ ಫೋಟೋ ಶೂಟ್ ಮಾಡುತ್ತಾ ಮಯೂರಿ ತಮ್ಮ ತಾಯ್ತನವನ್ನು ಸೆರೆ ಹಿಡಿಯುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version