‘ಫುಲೆ’ ಚಿತ್ರ ಬಿಡುಗಡೆ ಮತ್ತಷ್ಟು ವಿಳಂಬ: ಕಾರಣ ಏನು?

phule
10/04/2025

ಜಾತಿ ಮತ್ತು ಲಿಂಗ ಅಸಮಾನತೆ ವಿರುದ್ಧ ಹೋರಾಡಿದ ಸಮಾಜ ಸುಧಾರಕರಾದ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಜೀವನ ಕಥೆ ಆಧಾರಿತ ಚಿತ್ರ ‘ಫುಲೆ’ ಚಿತ್ರ  ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು.  ಆದರೆ ಇದೀಗ ಚಿತ್ರ ಬಿಡುಗಡೆಯನ್ನು ಎರಡು ವಾರ ಮುಂದೂಡಲಾಗಿದೆ.

ಮಹಾರಾಷ್ಟ್ರದ ಬ್ರಾಹ್ಮಣ ಸಮುದಾಯವು ಚಿತ್ರದ ವಿರುದ್ಧ ಕಳವಳ ವ್ಯಕ್ತಪಡಿಸಿದ ನಂತರ ಚಿತ್ರದಲ್ಲಿ ಬಳಕೆ ಮಾಡಿರುವ ‘ಮಹರ್’, ‘ಮಾಂಗ್’, ‘ಪೇಶ್ವಾಯಿ’ ಮತ್ತು ‘ಮನು ಜಾತಿ ವ್ಯವಸ್ಥೆ’ ಮೊದಲಾದ ಪದಗಳನ್ನು ತೆಗೆದು ಹಾಕಬೇಕು. ಅಲ್ಲದೇ  ಕೆಲವೊಂದು ಸಂಭಾಷಣೆಗಳನ್ನು ಬದಲಿಸಬೇಕು ಎಂದು ಕೇಂದ್ರ ಚಲನ ಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್ ಸಿ) ಸೂಚಿಸಿದೆ.

ಪೊರಕೆ ಹೊತ್ತ ವ್ಯಕ್ತಿ ಹಾಗೂ ಸಾವಿತ್ರಿ ಬಾಯಿಗೆ ಸಗಣಿ ಎಸೆಯುವ ಹುಡುಗರು ಈ ದೃಶ್ಯ ಹಾಗೂ ಸಂಭಾಷಣೆಯನ್ನ ಬದಲಾವಣೆ ಮಾಡಲು ಚಲನ ಚಿತ್ರ ಪ್ರಮಾಣೀಕರಣ ಮಂಡಳಿ ಸೂಚಿಸಿದೆ.

ನಿರ್ದೇಶಕ ಅನಂತ್ ಮಹಾದೇವನ್ ಅವರಿಗೆ ಬ್ರಾಹ್ಮಣ ಸಮುದಾಯಗಳಿಂದ ಹಲವಾರು ಪತ್ರಗಳು ಬಂದಿವೆ. ಟ್ರೇಲರ್ ಬಿಡುಗಡೆಯಾದ ನಂತರ ಈ ರೀತಿಯ ತಪ್ಪು ತಿಳುವಳಿಕೆಗಳು ಚಿತ್ರದ ಬಗ್ಗೆ ಮೂಡಿವೆ ಎಂದು ಅವರು ಹೇಳಿದ್ದಾರೆ.

YouTube video player

19 ನೇ ಶತಮಾನದಲ್ಲಿ ಜಾತೀಯತೆಯ ವಿರುದ್ಧ ಹೋರಾಡುವಲ್ಲಿ ಮತ್ತು ಮಹಿಳಾ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಪ್ರಯತ್ನಗಳ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಅನಂತ್ ಮಹಾದೇವನ್ ತಿಳಿಸಿದ್ದಾರೆ.

ಅಖಿಲ ಭಾರತೀಯ ಬ್ರಾಹ್ಮಣ ಸಮಾಜ ಮತ್ತು ಪರಶುರಾಮ ಆರತಿಕ್ ವಿಕಾಸ್ ಮಹಾಮಂಡಲ ಚಿತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಂಘಟನೆಗಳಾಗಿವೆ. ಜ್ಯೋತಿರಾವ್ ಫುಲೆ ಅವರ 20 ಶಾಲೆಗಳನ್ನು ಸ್ಥಾಪಿಸುವುದು ಮತ್ತು ಸತ್ಯಶೋಧಕ ಸಮಾಜದಂತಹ ಉಪಕ್ರಮಗಳನ್ನು ಕೆಲವು ಬ್ರಾಹ್ಮಣರು ಹೇಗೆ ಬೆಂಬಲಿಸಿದರು ಎಂಬುದನ್ನು ವಿವರಿಸಲು ತಾವು ಬ್ರಾಹ್ಮಣ ಸಮುದಾಯದ ಪ್ರತಿನಿಧಿಗಳನ್ನು ಭೇಟಿ ಮಾಡಿರುವುದಾಗಿ ಮಹಾದೇವನ್ ಉಲ್ಲೇಖಿಸಿದ್ದಾರೆ.

ಈ ಚಿತ್ರವು ಯಾವುದೇ ಅಜೆಂಡಾಗಳ ಮೂಲಕ ರೂಪಿತವಾಗಿಲ್ಲ, ಬದಲಾಗಿ ಸತ್ಯವನ್ನು ಮಾತ್ರವೇ ಪ್ರಸ್ತುತಪಡಿಸುತ್ತದೆ ಎಂದು ನಿರ್ದೇಶಕ ಮಹಾದೇವನ್ ತಿಳಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version