ಪೈಪ್ ಕತ್ತರಿಸಿದಾಗ ನೀರಿನ ಬದಲು ಬಂದದ್ದು ಕಂತೆ ಕಂತೆ ಹಣ! | ಎಸಿಬಿ ಅಧಿಕಾರಿಗಳಿಗೇ ಶಾಕ್! - Mahanayaka

ಪೈಪ್ ಕತ್ತರಿಸಿದಾಗ ನೀರಿನ ಬದಲು ಬಂದದ್ದು ಕಂತೆ ಕಂತೆ ಹಣ! | ಎಸಿಬಿ ಅಧಿಕಾರಿಗಳಿಗೇ ಶಾಕ್!

acb
24/11/2021

ಕಲಬುರ್ಗಿ: ಸರ್ಕಾರಿ ಅಧಿಕಾರಿಗಳಿಗೆ ಇಂದು ಎಸಿಬಿ ಅಧಿಕಾರಿಗಳು ಶಾಕ್ ನೀಡಿದ್ದು,  ನಗರದ ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವ ಶಾಂತಕುಮಾರ್ ಅವರ ಮನೆಗೆ ದಾಳಿ ನಡೆಸಿದಾಗ ಎಸಿಬಿ ಅಧಿಕಾರಿಗಳೇ ಶಾಕ್ ಗೊಳಗಾಗಿದ್ದಾರೆ.

ಮನೆಯಲ್ಲಿ ಅಳವಡಿಸಲಾಗಿದ್ದ ಪ್ಲಂಬಿಂಗ್ ಪೈಪ್ ಗಳಲ್ಲಿ ಕಂತೆ ಕಂತೆ ಹಣಗಳನ್ನು ಬಚ್ಚಿಡಲಾಗಿರುವುದನ್ನು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದು, ವರದಿಗಳ ಪ್ರಕಾರ ಸುಮಾರು 20 ಲಕ್ಷಕ್ಕೂ ಅಧಿಕ ಹಣ ಪೈಪ್ ನೊಳಗೆ ಬಚ್ಚಿಡಲಾಗಿತ್ತು ಎನ್ನಲಾಗಿದೆ.

ಎಸಿಬಿ ಅಧಿಕಾರಿಗಳು ದಾಳಿಗೆ ಮನೆ ಬಾಗಿಲಿಗೆ ಬಂದಾಗ ಮನೆಯವರು ಬಾಗಿಲು ತೆರೆಯಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಈ ಮನೆಯಲ್ಲಿ ಏನೋ ಇದೆ ಎಂದು ಅಧಿಕಾರಿಗಳು ಬಲವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಓರ್ವ ಪ್ಲಂಬರ್ ನನ್ನು ಕರೆಸಿ ಮನೆಗೆ ಅಳವಡಿಸಲಾಗಿದ್ದ ಪ್ಲಂಬಿಂಗ್ ಪೈಪ್ ಗಳನ್ನು ಕಟ್ ಮಾಡಿಸಿದ್ದಾರೆ. ಈ ವೇಳೆ ಪೈಪ್ ನ ಒಳಗಿನಿಂದ ನೀರು ಬರುವ ಬದಲು ಕಂತೆ ಕಂತೆ 500 ರೂಪಾಯಿಯ ನೋಟುಗಳು ಹೊರ ಬಂದವು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮನೆಗೆ ಎಸಿಬಿ ದಾಳಿ: ಕೋಟ್ಯಾಂತರ ಮೌಲ್ಯದ ನಗ—ನಗದು ಪತ್ತೆ

ವಿದ್ಯುತ್ ಸ್ಪರ್ಶಿಸಿ ಯುವತಿಯ ದಾರುಣ ಸಾವು

ಮಂಗಳೂರು: ಬಾಲಕಿಯ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಅರೆಸ್ಟ್: ಕೊಲೆಗೂ ಮುನ್ನ ನಡೆದಿತ್ತು ಸಾಮೂಹಿಕ ಅತ್ಯಾಚಾರ

ಶಾಕ್ ನೀಡಿದ ಪಾರ್ಲೆ—ಜಿ: ಪಾರ್ಲೆ ಉತ್ಪನ್ನಗಳ ಬೆಲೆ ಏರಿಕೆ

ಕೇರಳದಲ್ಲಿ ಬಿಜೆಪಿ ತಳವೂರಲು ಅವಕಾಶ ಕೊಡುವುದಿಲ್ಲ | ಶೈಲಜಾ ಟೀಚರ್

ಆಟೋ ತಡೆದು ಸಹೋದರರ ಮೇಲೆ ತಲ್ವಾರ್ ನಿಂದ ದಾಳಿ ನಡೆಸಿದ ದುಷ್ಕರ್ಮಿಗಳು

ಇತ್ತೀಚಿನ ಸುದ್ದಿ