ಶಾಕಿಂಗ್ ನ್ಯೂಸ್:  ಫಿರಾನಾ ಮೀನಿನ ದಾಳಿಗೆ 4 ಮಂದಿ ಸಾವು | ಹಲವರು ನಾಪತ್ತೆ - Mahanayaka

ಶಾಕಿಂಗ್ ನ್ಯೂಸ್:  ಫಿರಾನಾ ಮೀನಿನ ದಾಳಿಗೆ 4 ಮಂದಿ ಸಾವು | ಹಲವರು ನಾಪತ್ತೆ

piranha
07/01/2022

ಅತ್ಯಂತ ಅಪಾಯಕಾರಿ ಮೀನುಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಫಿರಾನಾ ಎಂಬ ಮೀನು ಪೆರುಗ್ವೆಯಲ್ಲಿ ಆತಂಕ ಸೃಷ್ಟಿಸಿದ್ದು, ನದಿಗೆ ಸ್ನಾನ ಮಾಡಲು ತೆರಳಿದ್ದ ನಾಲ್ವರನ್ನು ಕೊಂದು ಹಾಕಿರುವುದೇ ಅಲ್ಲದೇ 20ಕ್ಕೂ ಅಧಿಕ ಮಂದಿಯ ಮೇಲೆ ಭೀಕರ ದಾಳಿ ನಡೆಸಿದೆ.

ಇತ್ತೀಚೆಗೆ 49 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪೆರುಗ್ವೆಯ ನದಿಯಲ್ಲಿ ಈಜಲು ಹೋಗಿದ್ದ ವೇಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಅವರ ದೇಹದ ಮೇಲೆ ಗಂಭೀರವಾದ ಗಾಯಗಳು ಕಂಡು ಬಂದಿದ್ದವು. ಮರಣೋತ್ತರ ಪರೀಕ್ಷೆ ನಡೆಸಿದಾಗ ಅವರ ಮೇಲೆ ಪಿರಾನಾ ಮೀನು ದಾಳಿ ನಡೆಸಿರುವುದು ಬಯಲಿಗೆ ಬಂದಿತ್ತು.

ಇನ್ನೊಂದು ಘಟನೆಯಲ್ಲಿ ಯುವಕನೋರ್ವ ನದಿಗೆ ಇಳಿದಿದ್ದ ವೇಳೆ ಆತನ ಮೇಲೆ ದಾಳಿ ನಡೆಸಿದ ಫಿರಾನಾ ಆತನನ್ನು ನೀರಿನೊಳಗೆ ಎಳೆದೊಯ್ಯಲು ಯತ್ನಿಸಿದೆ. ಆದರೆ, ಆತ ಕೊನೆಯ ಕ್ಷಣದಲ್ಲಿ ಮೀನುಗಳಿಂದ ತಪ್ಪಿಸಿಕೊಂಡು ಮೇಲೆ ಬಂದಿದ್ದಾನೆ.

ಪೆರುಗ್ವೆ ನದಿಗೆ ಸ್ನಾನಕ್ಕೆ ಹೋಗಿದ್ದ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ಇವರನ್ನು ಫಿರಾನಾ ಬಲಿ ಪಡೆದಕೊಂಡಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಈಗಾಗಲೇ ಫಿರಾನಾದ ದಾಳಿಗೆ ತುತ್ತಾಗಿರುವ ನಾಲ್ಕು ಮಂದಿಯ ಮೃತದೇಹವನ್ನು  ನದಿಯಿಂದ ಮೇಲೆತ್ತಲಾಗಿದೆ.

ಇನ್ನೂ ಇಲ್ಲಿನ  ಇನ್ನೊಂದು ನದಿಯಾಗಿರುವ ಟೆಬ್ಯೂಕುರಿ ನದಿಯಲ್ಲಿ ಕೂಡ ಫಿರಾನಾದ ಹಾವಳಿ ಕಂಡು ಬಂದಿದ್ದು, ಇಲ್ಲಿ ಕೂಡ ಹಲವು ಜನರು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ನದಿಯಲ್ಲಿಯೂ  ಭಯಾನಕ ಫಿರಾನಾಗಳು ಬೀಡುಬಿಟ್ಟಿರುವ ಸಾಧ್ಯತೆಗಳು ಕಂಡು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಳೆದ 24 ಗಂಟೆಗಳಲ್ಲಿ  91,೦೦೦ ಹೊಸ ಕೊರೊನಾ ಕೇಸ್ ದಾಖಲು!

ಕಾರಿನಲ್ಲಿಯೇ ಉದ್ಯಮಿಯನ್ನು ಕೊಚ್ಚಿ ಭೀಕರ ಹತ್ಯೆ

ಫುಡ್ ಡೆಲಿವರಿ ಬಾಯ್ ಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್: ವಿಡಿಯೋ ವೈರಲ್

ದಕ್ಷಿಣ ಕೋರಿಯಾದ ಕಿಂಗ್ ಪಿನ್’ ನಂತೆ ಸಚಿವ ಮಾಧುಸ್ವಾಮಿ! | ಪತ್ರಿಕಾಗೋಷ್ಠಿಯಲ್ಲಿ ಪಿಸುಗುಟ್ಟಿದ ಬಿಜೆಪಿ ನಾಯಕರು

ತೋಟದ ಕೆಲಸಕ್ಕೆ ಹೊರಟಿದ್ದ ವೇಳೆ ಆನೆ ದಾಳಿ:  ಕಾರ್ಮಿಕ ಸಾವು

ಇತ್ತೀಚಿನ ಸುದ್ದಿ