ಅಳಿಯನ ಮೇಲೆ ಮಾವನಿಂದಲೇ ಪೈರಿಂಗ್: ಅಳಿಯನ ಸ್ಥಿತಿ ಗಂಭೀರ - Mahanayaka

ಅಳಿಯನ ಮೇಲೆ ಮಾವನಿಂದಲೇ ಪೈರಿಂಗ್: ಅಳಿಯನ ಸ್ಥಿತಿ ಗಂಭೀರ

belagavi
18/03/2024

ಬೆಳಗಾವಿ: ಅಳಿಯನ ಮೇಲೆ ಮಾವನೇ ಫೈರಿಂಗ್ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದ ಬಳಿ ನಡೆದಿದೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ  ಮಾವ ಈ ದುಷ್ಕೃತ್ಯ ಎಸಗಿದ್ದಾನೆ. ಶಾಂತಿನಾಥ ಆಲಗೂರು (32) ಎಂಬ ವ್ಯಕ್ತಿಯ ಮೇಲೆ ಆತನ ಮಾವ ಧನಪಾಲ್ ಆಸಂಗಿ (54) ಫೈರಿಂಗ್ ಮಾಡಿದ್ದಾನೆ.

ಶಾಂತಿನಾಥ್ ನ ಹೊಟ್ಟೆಯ ಭಾಗಕ್ಕೆ  ಗುಂಡು ತಾಗಿದ್ದು, ಶಾಂತಿನಾಥ್ ನ ಸ್ಥಿತಿ ಗಂಭೀರವಾಗಿದೆ.  ಕೂಡಲೇ ಆತನನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ ಆರೋಪಿ ಧನಪಾಲ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತ್ಮ ರಕ್ಷಣೆಗಾಗಿ ಪಡೆದುಕೊಂಡಿದ್ದ ರಿವಾಲ್ವರ್ ನಿಂದ ಆರೋಪಿ ಗುಂಡು ಹಾರಿಸಿದ್ದಾನೆ ಎಂದು ತಿಳಿದು ಬಂದಿದೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.





ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ