ಪಿಸ್ತೂಲ್  ಹಿಡಿದುಕೊಂಡು ಮತಗಟ್ಟೆಗೆ ಬಂದ ಚುನಾವಣಾಧಿಕಾರಿ

22/12/2020

ಬೆಳಗಾವಿ: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಚುನಾವಣಾಧಿಕಾರಿ ಲೋಡೆಡ್ ಪಿಸ್ತೂಲ್ ಹಿಡಿದುಕೊಂಡು  ಮತಗಟ್ಟೆ ಕರ್ತವ್ಯಕ್ಕೆ ಆಗಮಿಸಿದ ಘಟನೆ ನಡೆದಿದ್ದು, ಅಧಿಕಾರಿಯನ್ನು  ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ತಾಲೂಕಿನ ದೇವಸೂರ ಗ್ರಾಮದ ಮತಗಟ್ಟೆಗೆ ಪಿಆರ್ ಪಿ ಆಗಿ ನಿಯೋಜನೆಗೊಂಡಿದ್ದ ಅಧಿಕಾರಿ ಸುಲೇಮಾನ್ ಸನದಿ ಬಳಿಯಲ್ಲಿ ನಿನ್ನೆ ರಾತ್ರಿ ಪಿಸ್ತೂಲ್ ಪತ್ತೆಯಾಗಿತ್ತು.  ಈ ಪಿಸ್ತೂಲ್ ಲೈಸೆನ್ಸ್ ಇರುವ ಪಿಸ್ತೂಲ್ ಆಗಿದೆ ಎಂದು ಹೇಳಲಾಗಿದೆ.

ಸುಲೇಮಾನ್ ಅವರಲ್ಲಿ ಪಿಸ್ತೂಲ್ ಗಮನಿಸಿ ಚುನಾವಣಾ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.  ಯಾವುದೇ ಅನಾಹುತ ನಡೆಯ ಬಾರದು ಎನ್ನುವ ನಿಟ್ಟಿನಲ್ಲಿ ಈ ಮತಗಟ್ಟೆ ಪಿಆರ್ ಓ ಬದಲಾವಣೆ ಮಾಡಲಾಗಿದೆ.

ಇತ್ತೀಚಿನ ಸುದ್ದಿ

Exit mobile version