ಪಿಸ್ತೂಲ್ ಸ್ವಚ್ಛಗೊಳಿಸುತ್ತಿರುವ ವೇಳೆ ಹಾರಿದ ಗುಂಡು | ಕಾನ್ಟ್ಟೇಬಲ್ ದಾರುಣ ಸಾವು

pistol
23/08/2021

ದಾವಣಗೆರೆ: ಪಿಸ್ತೂಲ್ ಸ್ವಚ್ಛಗೊಳಿಸುತ್ತಿರುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್ಟೇಬಲ್ ಮೃತಪಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದ್ದು, ಪಿಸ್ತೂಲ್ ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಚನ್ನಗಿರಿ ಮೂಲದ ಚೇತನ್ ಮೃತ ಪೊಲೀಸ್ ಪೇದೆಯಾಗಿದ್ದು, ಪಿಸ್ತೂಲ್ ಸ್ವಚ್ಛಗೊಳಿಸುತ್ತಿರುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದೆ. ಈ ವೇಳೆ ಚೇತನ್ ಅವರು ಕುತ್ತಿಗೆಗೆ ಗುಂಡು ತಗಲಿದ್ದು, ಪರಿಣಾಮವಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಐದು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ಚೇತನ್ ಗೆ ಪುಟ್ಟ ಮಗನಿದ್ದಾನೆ. ಚೇತನ್ ಅವರ ನಿಧನದಿಂದಾಗಿ ಕುಟುಂಬಸ್ಥರು ಕಂಗಾಲಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಇನ್ನಷ್ಟು ಸುದ್ದಿಗಳು…

 

ಅಫ್ಘಾನಿಸ್ತಾನ ಮತ್ತೆ ಭಯೋತ್ಪಾದನೆಯ ಕೇಂದ್ರಬಿಂದು ಆಗದಿರಲಿ: ಸಿಂಗಪುರ ಪ್ರಧಾನಿ

ಕಳ್ಳ ನುಂಗಿದ ಚಿನ್ನದ ಸರವನ್ನು ಹೊರ ತೆಗೆದದ್ದು ಹೇಗೆ ಗೊತ್ತಾ? | ಕೊನೆಗೂ ಕಳ್ಳನ ಪ್ಲಾನ್ ಪ್ಲಾಪ್ ಆಯಿತು!

ಜಾತಿ ಜನಗಣತಿ ನಡೆಸಲು ಪ್ರಧಾನಿ ಮೋದಿಗೆ ಬೇಡಿಕೆ ಇಟ್ಟ ನಿತೀಶ್ ಕುಮಾರ್ ನೇತೃತ್ವದ ನಿಯೋಗ

ರಕ್ಷಾ ಬಂಧನ ಕಟ್ಟಿ ವಾಪಸ್ ಆಗುತ್ತಿದ್ದ ವೇಳೆ ಭೀಕರ ಅಪಘಾತ: ಪತಿ, ಪತ್ನಿ, ಮಗು ದಾರುಣ ಸಾವು

ದೇವಸ್ಥಾನಕ್ಕೆ ಬಂದಿದ್ದ ತಂದೆ, ತಾಯಿ, ಮಗಳು ನದಿಯಲ್ಲಿ ಕೊಚ್ಚಿ ಹೋಗಿ ಸಾವು!

ನಾಳೆಯಿಂದ ಶಾಲಾ ಕಾಲೇಜು ಆರಂಭ | ಕೊವಿಡ್ ಗೆ ಸೆಡ್ಡು ಹೊಡೆಯಲು ಸರ್ಕಾರದ ನಡೆಸಿರುವ ಸಿದ್ಧತೆ ಹೇಗಿದೆ ಗೊತ್ತಾ?

ಅಪ್ರಾಪ್ತ ಬಾಲಕಿಯ ಮೊಬೈಲ್ ಗೆ ಅಶ್ಲೀಲ ಚಿತ್ರ ಕಳುಹಿಸಿದ ಮಹಿಳೆ | ಮಹಿಳೆಯ ವಿಲಕ್ಷಣ ಮನಸ್ಥಿತಿಗೆ ಬೆಚ್ಚಿಬಿದ್ದ ಪೋಷಕರು

ಇತ್ತೀಚಿನ ಸುದ್ದಿ

Exit mobile version