ಅಂಪೈರ್ ತೀರ್ಮಾನ ವಿರುದ್ಧ ರೊಚ್ಚಿಗೆದ್ದ ಆಟಗಾರರು: ಮೈದಾನದಲ್ಲೇ ಕಬಡ್ಡಿ ಆಟಗಾರರ ಹೊಡೆದಾಟ - Mahanayaka

ಅಂಪೈರ್ ತೀರ್ಮಾನ ವಿರುದ್ಧ ರೊಚ್ಚಿಗೆದ್ದ ಆಟಗಾರರು: ಮೈದಾನದಲ್ಲೇ ಕಬಡ್ಡಿ ಆಟಗಾರರ ಹೊಡೆದಾಟ

kabaddi fight
21/02/2023

ಬೆಳ್ತಂಗಡಿ: ಅಂಪೈರ್ ತೀರ್ಪಿನ ವಿರುದ್ಧ ರೊಚ್ಚಿಗೆದ್ದ ಆಟಗಾರರು ಮೈದಾನದಲ್ಲಿ ಹೊಡೆದಾಡಿಕೊಂಡ ಘಟನೆ  ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ನಡೆದಿದೆ.


Provided by

ಶಾಸಕ ಹರೀಶ್ ಪೂಂಜ ಅಭಿಮಾನಿ ಬಳಗ ಮುಂಡಾಜೆ ವತಿಯಿಂದ ನಡೆದಿದ್ದ ಕಬಡ್ಡಿ ಪಂದ್ಯಾಟದಲ್ಲಿ ಆಂಪ್ಯಾರ್ ಕೊಟ್ಟ ತೀರ್ಪಿನ ವಿರುದ್ಧ ಆಟಗಾರರು ರೊಚ್ಚಿಗೆದ್ದು  ಪರಸ್ಪರ ಹೊಡೆದಾಟ ನಡೆಸಿರುವುದಲ್ಲದೆ ತೀರ್ಪುಗಾರರ ಮೇಲೆಯೂ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೋಮಂದಡ್ಕದ ಆಡೂರು ಮೈದಾನದಲ್ಲಿ ಫೆ.19 ರಂದು ತಡರಾತ್ರಿ  ಈ ಘಟನೆ ನಡೆದಿದೆ ಎನ್ನಲಾಗಿದೆ.  ಆಟಗಾರರ ಮಧ್ಯೆ ನಡೆದ ಹೊಡೆದಾಟದಲ್ಲಿ ಸಂಘಟಕರೂ ಭಾಗಿಗಳಾಗಿರುವುದಾಗಿ ತಿಳಿದು ಬಂದಿದೆ. ಇದೀಗ ಹೊಡೆದಾಟದ  ವಿಡಿಯೋ ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗ್ತಿದೆ.


Provided by

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ