“ಪಿಎಂ ಕೇರ್ಸ್ ಫಂಡ್‍ ಗೆ  ಅಪ್ಪ-ಅಮ್ಮನೇ ಇಲ್ಲದಂತಾಗಿದೆ!” - Mahanayaka
6:09 PM Wednesday 11 - December 2024

“ಪಿಎಂ ಕೇರ್ಸ್ ಫಂಡ್‍ ಗೆ  ಅಪ್ಪ-ಅಮ್ಮನೇ ಇಲ್ಲದಂತಾಗಿದೆ!”

pm cares fund
24/09/2021

ಹುಬ್ಬಳ್ಳಿ: ಪಿಎಂ ಕೇರ್ಸ್ ಫಂಡ್ ಸರ್ಕಾರದ ನಿಧಿಯಲ್ಲಿ ಇಲ್ಲವೆಂದು ಕೇಂದ್ರ ಸರ್ಕಾರ ದೆಹಲಿ ಕೋರ್ಟ್‍ಗೆ ಅಫಿಡೆವಿಟ್ ನೀಡಿದೆ. ಹಾಗಾದರೆ ಈ ನಿಧಿಗೆ ನಿಜವಾದ ವಾರಸುದಾರರು ಯಾರು? ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಪ್ರಶ್ನಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊರೊನಾ ಪ್ರಥಮ ಅಲೆಯಲ್ಲಿ ಕೇಂದ್ರ ರಾಷ್ಟ್ರೀಯ ವಿಪತ್ತು ನಿಧಿಗೆ ಪರ್ಯಾಯವಾಗಿ ಪಿಎಂ ಕೇರ್ಸ್ ಫಂಡ್ ಸ್ಥಾಪಿಸಿ ಕೊಟ್ಯಂತರ ರೂಪಾಯಿ ಸಂಗ್ರಹಿಸಲಾಗಿದೆ. ಈ ಹಣಕ್ಕೆ ಉತ್ತರದಾಯಿತ್ವ ಇರಬೇಕಲ್ಲವೆ? ಕೊರೊನಾದಂಥ ಸಂಕಷ್ಟ ಸಂದರ್ಭದಲ್ಲೂ ಭಾವನಾತ್ಮಕ ಭಾಷಣದಿಂದ ಜನರಿಂದ ಪಿಎಂ ಕೇರ್ಸ್ ಮೂಲಕ ಹಣ ಲೂಟಿ ಮಾಡಲಾಗಿದೆ. ಇದೀಗ ಕೇಂದ್ರದ ಅಫಿಡೆವಿಟ್‍ನಿಂದ ಪಿಎಂ ಕೇರ್ಸ್ ಫಂಡ್‍  ಅಪ್ಪ-ಅಮ್ಮನೇ ಇಲ್ಲದಂತಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಭಾರತೀಯರು ಪಿಎಂ ಕೇರ್ಸ್‍ಗೆ ತಮ್ಮ ದುಡಿಮೆಯಲ್ಲಿ ಒಂದಿಷ್ಟು ಹಣ ನೀಡಿದ್ದಾರೆ. ದೇಶದ ಜನ ಸಂಕಷ್ಟಕ್ಕಾಗಿ ಸಂಗ್ರಹಿಸಿರುವ ನಿಧಿಯನ್ನು ಕೇಂದ್ರ ಸರ್ಕಾರದ ನಿಧಿ ಅಲ್ಲ ಎಂದು ಅಫಿಡೆವಿಟ್ ನೀಡಿದೆ. ಇದು ಸರ್ಕಾರದ ಸ್ವತ್ತು ಆಗಲ್ಲ ಎನ್ನುವುದಾದರೆ ಪ್ರಧಾನ ಮಂತ್ರಿ ಹೆಸರಲ್ಲಿ ಸ್ಥಾಪಿಸುವ ಉದ್ದೇಶವೇನಿತ್ತು ಎಂದು ಅವರು ಪಶ್ನಿಸಿದ್ದಾರೆ.

ಪಿಎಂ ಕೇರ್ಸ್ ಸರ್ಕಾರದ ನಿಧಿಯಲ್ಲಿ ಸಂಗ್ರಹವಾದ ಹಣ ಭಾರತದ ಏಕೀಕೃತ ನಿಧಿಗೆ ಹೋಗಲ್ಲ ಎಂಬ ಕೇಂದ್ರದ ವಾದ ಸರಿಯಲ್ಲ, ಪ್ರಧಾನ ಮಂತ್ರಿಯ ಸ್ಥಾನಕ್ಕೆ ಅದರದ್ದೇ ಆದ ಘನತೆ-ಗೌರವವಿದೆ. ಆದರೆ ಪ್ರಧಾನಿ ಸ್ಥಾನದಲ್ಲಿ ಕುಳಿತವರಿಂದಲೇ ಆ ಸ್ಥಾನದ ಘನತೆಗೆ ಧಕ್ಕೆಯಾದರೆ, ಅದು ಬೇಲಿಯೇ ಎದ್ದು ಹೊಲ ಮೇಯ್ದಂತಲ್ಲವೆ ಎಂದು ಅವರು ಕೇಂದ್ರ ಸರ್ಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು ಎಂದ ಉತ್ತರ ಪ್ರದೇಶ ಸಚಿವ!

ಪೆಟ್ರೋಲ್, ಡೀಸೆಲ್ ಗೆ ನೀರು ಬೆರಕೆ | ಪೆಟ್ರೋಲ್ ಬಂಕ್ ಮಾಲಿಕನ ವಿರುದ್ಧ ಗ್ರಾಹಕರಿಂದ ತೀವ್ರ ಆಕ್ರೋಶ

ತುಪ್ಪ ಬೇಕಾ ತುಪ್ಪ ಎಂದು ಮನೆಯೊಳಗೆ ಎಂಟ್ರಿ ಕೊಡುತ್ತಿದ್ದ ಮಹಿಳೆಯರು ಅರೆಸ್ಟ್ | ಅಷ್ಟಕ್ಕೂ ಇವರು ಮಾಡ್ತಿದ್ದದ್ದೇನು ಗೊತ್ತಾ?

ವಿಧಾನಮಂಡಲ ಅಧಿವೇಶನದಲ್ಲಿ  ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ

ಕ್ಯಾನ್ಸರ್ ನ್ನು ಗೆದ್ದವ ಪಾರ್ಟಿಯಲ್ಲಿ ಬಿಯರ್ ಬ್ಯಾರೆಲ್ ಸ್ಫೋಟಗೊಂಡು ಮೃತಪಟ್ಟ!

ಪತ್ನಿ ದಿನವೂ ಸ್ನಾನ ಮಾಡುತ್ತಿಲ್ಲ ಎಂದು ವಿಚ್ಛೇದನ ನೀಡಿದ ಪತಿ

ಇತ್ತೀಚಿನ ಸುದ್ದಿ