ಪ್ರಧಾನಿ ಮೋದಿ ಒಮ್ಮೆಯಾದರೂ ಮಣಿಪುರಕ್ಕೆ ಹೋಗಿ ಬರಬೇಕು: ರಾಹುಲ್ ಗಾಂಧಿ ಮತ್ತೆ ವಾಗ್ಯುದ್ದ - Mahanayaka
4:10 PM Thursday 12 - December 2024

ಪ್ರಧಾನಿ ಮೋದಿ ಒಮ್ಮೆಯಾದರೂ ಮಣಿಪುರಕ್ಕೆ ಹೋಗಿ ಬರಬೇಕು: ರಾಹುಲ್ ಗಾಂಧಿ ಮತ್ತೆ ವಾಗ್ಯುದ್ದ

12/08/2023

ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣದ ಬಗ್ಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂಸಾಚಾರ, ಅತ್ಯಾಚಾರ, ಹತ್ಯೆಗಳಿಂದ ಮಣಿಪುರವು ತತ್ತರಿಸಿ ಹೋಗಿದೆ. ಇತ್ತ ಪ್ರಧಾನಿ ಸಂಸತ್‍ನಲ್ಲಿ ನಗುತ್ತಾ ಜೋಕ್‍ಗಳನ್ನು ಮಾಡಿಕೊಂಡಿದ್ದಾರೆ. ವಿಪಕ್ಷಗಳನ್ನು ಟೀಕಿಸುತ್ತಾ ನಿನಾದಗಳನ್ನು ಹೊರಡಿಸಿದ್ದಾರೆ. ಈ ಹಿಂದೆ ಎಷ್ಟೋ ಪ್ರಧಾನಿಗಳನ್ನು ನೋಡಿದ್ದೇವೆ. ಆದರೆ ಈ ಮಟ್ಟಕ್ಕೆ ಇಳಿದು ಮಾತಾಡಿದ ಪ್ರಧಾನಿಯನ್ನು ನಾನು ನೋಡಿರಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿಗಳು ಮಾತಾಡಿದ ರೀತಿ ನೋವು ತಂದಿದೆ. ಪ್ರಧಾನಿ 2 ಗಂಟೆ 13 ನಿಮಿಷಗಳ ಭಾಷಣ ಮಾಡಿದ್ದಾರೆ. ಆದರೆ ಅದರಲ್ಲಿ ಮಣಿಪುರದ ಬಗ್ಗೆ ಪ್ರಸ್ತಾಪ ಇದ್ದಿದ್ದು ಕೇವಲ 2 ನಿಮಿಷ ಮಾತ್ರ. ಕಳೆದ ಮೂರು ತಿಂಗಳಿಂದ ಮಣಿಪುರದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಪ್ರಧಾನಿ ಮರೆತಂತಿದೆ ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ಹುದ್ದೆಗೇರಿದ ವ್ಯಕ್ತಿ ದೇಶದ ಪ್ರಜೆಗಳಿಗೆಲ್ಲ ಪ್ರತಿನಿಧಿಯಾಗಿ ಇರಬೇಕು. ಅವರು ಓರ್ವ ರಾಜಕೀಯ ನಾಯಕನಾಗಿ ಮಾತನಾಡಬಾರದು. ಇಲ್ಲಿ ಸಮಸ್ಯೆ ಕಾಂಗ್ರೆಸ್, ಬಿಜೆಪಿ ಎನ್ನುವುದಲ್ಲ. 2024ಕ್ಕೆ ಮೋದಿ ಮತ್ತೆ ಪ್ರಧಾನಿ ಆಗ್ತಾರಾ ಇಲ್ವಾ ಎನ್ನುವ ವಿಚಾರ ಕೂಡ ಅಲ್ಲ. ಮಣಿಪುರದಲ್ಲಿ ಏನು ನಡೆಯುತ್ತಿದೆ. ಅದನ್ನು ಏಕೆ ತಡೆಯಲಾಗುತ್ತಿಲ್ಲ. ಎನ್ನುವುದು ಪ್ರಧಾನ ಸಮಸ್ಯೆಯಾಗಿದೆ. ಇದನ್ನು ಬಗೆಹರಿಸಲು ಪ್ರಧಾನಿ ಬಳಿ ಸಾಕಷ್ಟು ಅವಕಾಶಗಳಿವೆ. ಆದರೆ ಅವರೇಕೆ ಅವುಗಳನ್ನು ಬಳಸಿಲ್ಲ..? ಸೇನೆಯನ್ನು ಕಳಿಸಿ ಎರಡರಿಂದ ಮೂರು ದಿನಗಳಲ್ಲಿ ಶಾಂತಿ ಸ್ಥಾಪಿಸಬಹುದು. ಆದರೆ ಅದನ್ನೇಕೆ ಮಾಡುತ್ತಿಲ್ಲ..? ಅವರಿಗೆ ಮಣಿಪುರ ಉರಿಯುತ್ತಲೇ ಇರಬೇಕು ಎಂಬ ಬಯಕೆ ಇದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರಧಾನಿ ಮೋದಿ ಒಮ್ಮೆಯಾದರೂ ಮಣಿಪುರಕ್ಕೆ ಹೋಗಿ ಬರಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇನ್ನು, ತಮ್ಮ ಭಾಷಣದ ಕೆಲವನ್ನು ಕಡತದಿಂದ ತೆಗೆದ ಬಗ್ಗೆಯೂ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಭಾರತ ಮಾತೆ ಎಂಬ ಪದವನ್ನು ಕಡತದಿಂದ ತೆಗೆದಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ