ಫ್ರಾನ್ಸ್ ಗೆ ಮೋದಿ ಭೇಟಿ: ನಮೋ ಎಂಟ್ರಿಯಾಗ್ತಿದ್ದಂತೆ 'ಭಾರತ್ ಮಾತಾ ಕಿ‌ ಜೈ' ಉದ್ಗಾರ - Mahanayaka

ಫ್ರಾನ್ಸ್ ಗೆ ಮೋದಿ ಭೇಟಿ: ನಮೋ ಎಂಟ್ರಿಯಾಗ್ತಿದ್ದಂತೆ ‘ಭಾರತ್ ಮಾತಾ ಕಿ‌ ಜೈ’ ಉದ್ಗಾರ

13/07/2023

2 ದಿನಗಳ ಅಧಿಕೃತ ಭೇಟಿಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಫ್ರಾನ್ಸ್‌ಗೆ ತಲುಪಿದರು. ಅವರನ್ನು ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಎಲಿಜಬೆತ್ ಬೋರ್ನ್ ಸ್ವಾಗತಿಸಿದರು. ಪ್ಯಾರಿಸ್‌ ತಲುಪಿದ ಬೆನ್ನಲ್ಲೇ ಮೋದಿ ಅವರು, ಭಾರತೀಯ ಸಮುದಾಯದ ಸದಸ್ಯರನ್ನು ಭೇಟಿಯಾದರು. ಇದೇ ವೇಳೆ ‘ಭಾರತ್ ಮಾತಾ ಕಿ ಜೈ’ ಘೋಷಣೆ ಮುಗಿಲುಮುಟ್ಟಿತು.

ಭಾರತೀಯ ಸಮುದಾಯದವರ ಭೇಟಿ ವೇಳೆ ಮಹಿಳೆಯೊಬ್ಬರು ಪ್ರಧಾನಿ ಮೋದಿ ಅವರಿಗೆ ಹಾಡು ಹಾಡುವ ಮೂಲಕ ಸ್ವಾಗತ ಕೋರಿದರು. ಮೋದಿ ಅವರ ಭೇಟಿಯಿಂದ ಭಾರತೀಯ ಮೂಲದ ಜನರಲ್ಲಿ ಉತ್ಸಾಹ ಗರಿಗೆದರಿತು.

ಈ ಕುರಿತು ಟ್ವೀಟ್ ಮಾಡಿದ ಪ್ರಧಾನಿ ಮೋದಿ, ‘ಪ್ಯಾರಿಸ್‌ನಲ್ಲಿರುವ ಭಾರತೀಯ ವಲಸಿಗರಿಂದ ಆತ್ಮೀಯ ಸ್ವಾಗತ ದೊರೆಯಿತು. ಪ್ರಪಂಚದಾದ್ಯಂತ, ನಮ್ಮ ಸಮುದಾಯದವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಶ್ರದ್ಧೆ ಮತ್ತು ಶ್ರಮಶೀಲ ಸ್ವಭಾವಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ ಎಂದಿದ್ದಾರೆ.


Provided by

ಭಾರತ-ಫ್ರಾನ್ಸ್ ವ್ಯೂಹಾತ್ಮಕ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲೇ ಮೋದಿ ಅವರು ಫ್ರಾನ್ಸ್​ಗೆ ಭೇಟಿ ನೀಡಿದ್ದಾರೆ. ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯ ಪ್ರಮುಖ ಅತಿಥಿಯಾಗಿ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ