ಇಂದು ಮಧ್ಯಾಹ್ನ ಕರ್ನಾಟಕಕ್ಕೆ ಪ್ರಧಾನಿ ಮೋದಿ ಆಗಮನ: ಏನೇನು ಕಾರ್ಯಕ್ರಮವಿದೆ?
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಮಧ್ಯಾಹ್ನ ಕರ್ನಾಟಕಕ್ಕೆ ಆಗಮಿಸಲಿದ್ದು, ಸರ್ಕಾರದ ವಿವಿಧ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ.ಅಗ್ನಿಪಥ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳಿಗೆ ಭಾರೀ ಭದ್ರತೆಯನ್ನು ಏರ್ಪಡಿಸಲಾಗಿದೆ.
ದೇಶದ ಮೊದಲ ಸಂಪೂರ್ಣ ಶೀತಲೀಕೃತ ರೈಲು ನಿಲ್ದಾಣವಾಗಿರುವ ಬೈಪನಹಳ್ಳಿ ನಿಲ್ದಾಣವನ್ನು ಮೋದಿ ಉದ್ಘಾಟಿಸಲಿದ್ದಾರೆ. ಇಂದು ಅಪರಾಹ್ನ, ನಾನು ಡಾ. ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್), ಬೆಂಗಳೂರು ಇಲ್ಲಿ ಬೇಸ್ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಉದ್ಘಾಟನೆ ಮತ್ತು ಡಾ ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯ ಅನಾವರಣ.150 ಟೆಕ್ ಹಬ್ ಗಳ ಲೋಕಾರ್ಪಣೆ ಕೂಡ ಮಾಡಲಿದ್ಧಾರೆ.
ಬೆಂಗಳೂರು ಕಂಟೋ ನ್ಮೆಂಟ್ ರೈಲು ನಿಲ್ದಾಣ ನವೀಕರಣ ಯೋಜನೆಗೆ ಚಾಲನೆ.1,280 ಕೋ.ರೂ. ಮೊತ್ತದಲ್ಲಿ ಸಂಪೂರ್ಣ ವಿದ್ಯುದೀಕರಣಗೊಂಡ 740 ಕಿ.ಮೀ. ಉದ್ದದ ಕೊಂಕಣ ರೈಲ್ವೇ ಮಾರ್ಗ ಲೋಕಾರ್ಪಣೆ,2,280 ಕೋ.ರೂ. ವೆಚ್ಚದ ಎರಡು ವರ್ತುಲ ರಸ್ತೆಗಳಿಗೆ ಶಂಕುಸ್ಥಾಪನೆ.4,600 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಡಾ| ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ ಉದ್ಘಾಟನೆ, 150 ಟೆಕ್ನಾಲಜಿ ಹಬ್‌ಗಳ ಲೋಕಾರ್ಪಣೆ ,148 ಕಿ.ಮೀ. ಉದ್ದದ ಬೆಂಗಳೂರು ಉಪ ನಗರ ರೈಲು ಯೋಜನೆಗೆ ಶಂಕುಸ್ಥಾಪನೆ.ಐಐಎಸ್‌ಸಿಯಲ್ಲಿ ಮೆದುಳು ಸಂಶೋಧನ ಕೇಂದ್ರದ ಉದ್ಘಾಟನೆ ನಂತರ
ಪ್ರಧಾನಿ ಮೈಸೂರಿಗೆ ವಾಪಸಾಗಲಿದ್ದು,ನಾಳೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬಜರಂಗದಳ ಮುಖಂಡನಿಗೆ ತಂಡದಿಂದ ಮಾರಣಾಂತಿಕ ಹಲ್ಲೆ!
ಪ್ರತಿಮೆಗಳ ಜೊತೆಗೆ ಇವರು ಹೇಗೆಲ್ಲ ಫೋಟೋ ತೆಗೆದುಕೊಳ್ಳುತ್ತಾರೆ ನೋಡಿ!
ಮೊದಲ ಬಾರಿಗೆ ತನ್ನ ಮಗುವಿನ ಚಿತ್ರ ಹಂಚಿಕೊಂಡ ಯುವರಾಜ್ ಸಿಂಗ್
ಇನ್ನೇನು ಅಂತ್ಯಕ್ರಿಯೆ ಮಾಡಬೇಕು ಅನ್ನೋವಷ್ಟರಲ್ಲಿ ಎಣ್ಣೆ ಹೊಡೆದು ತೂರಾಡುತ್ತಾ ಬಂದ ಸತ್ತ ವ್ಯಕ್ತಿ!