ದೊಡ್ಡ ಪ್ರಮಾಣದ ಅಭಿವೃದ್ಧಿ ಆಗುತ್ತಿದೆ ಅಂತ ಹೆಮ್ಮೆಯಿಂದ ಹೇಳ್ತೀನಿ: ಮಂಗಳೂರಿನಲ್ಲಿ ಬೊಮ್ಮಾಯಿ ಹೇಳಿಕೆ

basavaraj bommai
02/09/2022

ಮಂಗಳೂರು: ಪ್ರಧಾನಿ ಮೋದಿ ಆಡಳಿತ ಯಶಸ್ವಿಯಾಗಿದ್ದು,  ನಾಲ್ಕು ಪಟ್ಟು ಹೆಚ್ಚು ಕ್ಯಾಪಸಿಟಿ ಜಾಸ್ತಿಯಾಗ್ತಿದೆ. ದೊಡ್ಡ ಪ್ರಮಾಣದ ಅಭಿವೃದ್ಧಿ ಆಗುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ಮಂಗಳೂರಿನ ಕೂಳೂರು ಗೋಲ್ಡ್ ಫಿಂಚ್ ನಲ್ಲಿ ಹೇಳಿಕೆ ನೀಡಿದ‌ ಸಿಎಂ ಬಸವರಾಜ ಬೊಮ್ಮಾಯಿ‌, ದೊಡ್ಡ ಪ್ರಮಾಣದ ಅಭಿವೃದ್ಧಿ ಆಗುತ್ತಿದೆ. ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೀನಿ.  ಬಹಳ ಜನರು ಡಬಲ್ ಎಂಜಿನ್ ಸರ್ಕಾರ ಇದ್ರೆ ಏನಾಗಿದೆ ಅಂತ ಕೇಳಿದ್ರು, ಅದಕ್ಕೆ ನಮ್ಮ ಅಭಿವೃದ್ಧಿ ಕೆಲಸಗಳೇ ಉದಾಹರಣೆ.  ಸಿಆರ್ ಝಡ್ ನಿಂದ ಅನುಕೂಲ ಆಗಿದೆ. ನರೇಂದ್ರ ಮೋದಿಯವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೀನಿ ಎಂದರು.

YouTube video player

ಮತ್ಸ್ಯ ಸಂಪದ ಯೋಜನೆಯಲ್ಲಿ ಮೀನುಗಾರರಿಗೆ ಅನುಕೂಲವಾಗಲಿದೆ. ಕರ್ನಾಟಕ ಅಭಿವೃದ್ಧಿ ಜತೆಗೆ ದೇಶದ ಅಭಿವೃದ್ಧಿ ಮಾಡಲಾಗ್ತಿದೆ.  ಡಬಲ್ ಇಂಜಿನ್ ಸರ್ಕಾರ ದೇಶವನ್ನು ಸಕ್ಸಸ್ ನಿಂದ ಮುನ್ನಡೆಸುತ್ತಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.

ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ:

ಇನ್ನೂ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಿದ್ರು.  ಸಾಂಕೇತಿಕವಾಗಿ ಮೂರು ಮಂದಿಗೆ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲಾಯಿತು.

ಮನೋಜ್, ಶ್ರೀನಿವಾಸ ಪುತ್ರನ್  ಎಂಬವರಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನ  ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಸಾನ್ ಕಾರ್ಡ್ ವಿತರಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ

Exit mobile version