ಮಂಗಳೂರಿಗೆ ಮೋದಿಯು ಬರುವರು ಸ್ವಾಗತ ಕೋರೋಣ: ಯಕ್ಷಗಾನ ಶೈಲಿಯ ಹಾಡು ವೈರಲ್
ಮಂಗಳೂರಿನಲ್ಲಿ ಶುಕ್ರವಾರ ಪ್ರಧಾನಿ ಮೋದಿ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ಮಂಗಳೂರು ಫುಲ್ ರೆಡಿಯಾಗಿದೆ. ಸ್ಥಳ ಪರಿಶೀಲನೆಯಿಂದ ಹಿಡಿದು ರಕ್ಷಣಾ ವಿಚಾರದಲ್ಲೂ ಫುಲ್ ಭಧ್ರತೆ ತಯಾರಿಯಲ್ಲಿದೆ.
ಮತ್ತೊಂದೆಡೆ ಮಂಗಳೂರಿನ ರಸ್ತೆಗಳು ಡಾಮರೀಕರಣಗೊಂಡು ಫಳಫಳನೆ ಹೊಳೆಯುತ್ತಿದೆ. ಮೋದಿ ಆಗಮನಕ್ಕೆ ಭಾಗವತಿಕೆಯ ಸ್ವಾಗತ. ಮೋದಿ ಆಗಮನದ ಸಂತಸದಲ್ಲಿರೋ ಮಂಗಳೂರು ಜನತೆ ವಿಶೇಷ ರೀತಿಯಲ್ಲಿ ಪ್ರಧಾನಿ ಆಗಮನಕ್ಕೆ ತಯಾರಿಯಲ್ಲಿದ್ದಾರೆ. ಇದೀಗ ಮಂಗಳೂರಿಗರು ಯಕ್ಷಗಾನದ ಸಗಡನ್ನು ಮೋದಿಗೆ ತಿಳಿಸುವ ಸಲುವಾಗಿ ಯೋಜನೆ ಹಾಕಿದ್ದಾರೆ.
ಯಕ್ಷಗಾನದಿಂದ ವಿಮುಖರಾಗುತ್ತಿದ್ದ ಯುವಜನತೆಯನ್ನು ತಂಡೋಪತಂಡವಾಗಿ ಸೆಳೆದ ಧೀಮಂತ ವ್ಯಕ್ತಿತ್ವ ಇದು. ಕನ್ನಡದ ವ್ಯಾಕರಣ ಶುದ್ಧತೆಗೆ ಹೆಸರಾಗಿರುವ ಯಕ್ಷಗಾನವನ್ನು ಮತ್ತಷ್ಟು ಪ್ರೇಕ್ಷಕರ ಸಮೀಪಕ್ಕೆ ತಂದವರು. ಯಕ್ಷಗಾನ ರಂಗದ ತೆಂಕುತಿಟ್ಟು ಮಾತ್ರವಲ್ಲ ಬಡಗುತಿಟ್ಟು ಪ್ರದೇಶಗಳಲ್ಲೂ ಜನಪ್ರಿಯತೆ ಗಳಿಸಿಕೊಂಡ ಅಪರೂಪದ ಯುವ ಭಾಗವತ ಇವರು. ದೇಶ, ವಿದೇಶಗಳಲ್ಲೂ ಇಂದು ಯಕ್ಷಗಾನದ ಕಂಪು ಪಸರಿಸುತ್ತಿರುವ ಈ ಯುವಕನ ಕಂಠ ಸಿರಿಗೆ ತಲೆದೂಗದವರಿಲ್ಲ.
ಅದೇ ಕಂಠಸಿರಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಗೆ ಗಂಡುಕಲೆ ಯಕ್ಷಗಾನದ ಭಾಗವತಿಕೆಯಲ್ಲಿ ಸ್ವಾಗತ ಹಾಡೊಂದು ಹಾಡಲಾಗಿದೆ. ಸುಮಧುರ ಕಂಠದಲ್ಲಿ ಮೂಡಿ ಬಂದಿರೋ ಈ ಹಾಡಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಹೊಸ ಶೈಲಿಯ ಸ್ವಾಗತಕ್ಕೆ ಮಂಗಳೂರಿಗರು ಫುಲ್ ಖುಷ್ ಆಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka