ನೇಪಾಳ ಪ್ರಧಾನಿ ಜತೆ ಮೋದಿ ಮಾತುಕತೆ: ಬತ್ನಾಹಾ ನೇಪಾಳ ರೈಲಿಗೆ ಚಾಲನೆ - Mahanayaka

ನೇಪಾಳ ಪ್ರಧಾನಿ ಜತೆ ಮೋದಿ ಮಾತುಕತೆ: ಬತ್ನಾಹಾ ನೇಪಾಳ ರೈಲಿಗೆ ಚಾಲನೆ

01/06/2023

ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಪುಷ್ಪಕಮಲ್ ದಹಲ್ ಪ್ರಚಂಡ ಅವರು ಇಂದು ಇಂಧನ, ಸಂಪರ್ಕ ಮತ್ತು ವ್ಯಾಪಾರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಭಾರತ-ನೇಪಾಳ ಸಹಕಾರವನ್ನು ಹೆಚ್ಚಿಸುವ ಕುರಿತು ಮಾತುಕತೆ ನಡೆಸಿದರು.

ನೇಪಾಳದ ಪ್ರಧಾನಿ ನಾಲ್ಕು ದಿನಗಳ ಭಾರತ ಪ್ರವಾಸಕ್ಕಾಗಿ ನಿನ್ನೆ ದೆಹಲಿಗೆ ಬಂದಿದ್ದರು. ಇಂದು ಮೋದಿ ಮತ್ತು ಪುಷ್ಪ ಕಮಲ್ ದಹಲ್ ಪ್ರಚಂಡ ಜಂಟಿಯಾಗಿ ರೈಲ್ವೆಯ ಕುರ್ತಾ-ಬಿಜಾಲ್‌ಪುರ ವಿಭಾಗದ ಇ-ಫಲಕವನ್ನು ಅನಾವರಣಗೊಳಿಸಿದರು.

ಇಬ್ಬರು ಪ್ರಧಾನ ಮಂತ್ರಿಗಳು ಜಂಟಿಯಾಗಿ ಬತ್ನಾಹಾದಿಂದ ನೇಪಾಳ ಕಸ್ಟಮ್ ಯಾರ್ಡ್‌ಗೆ ಭಾರತೀಯ ರೈಲ್ವೆ ಕಾರ್ಗೋ ರೈಲಿಗೆ ಚಾಲನೆ ನೀಡಿದ್ದಾರೆ. 68ರ ಹರೆಯದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಮಾವೋವಾದಿ (ಸಿಪಿಎನ್-ಮಾವೋವಾದಿ) ನಾಯಕರಾದ ಇವರು ಡಿಸೆಂಬರ್ 2022 ರಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ನಂತರ ಇದು ಮೊದಲ ದ್ವಿಪಕ್ಷೀಯ ವಿದೇಶ ಪ್ರವಾಸವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ