ಬ್ರೂನೈ ದೇಶದಲ್ಲಿ ಪ್ರಧಾನಿ ಮೋದಿ: ಮುಸ್ಲಿಂ ರಾಜನ ಅರಮನೆಯಲ್ಲಿ ನಮೋಗೆ ಸ್ವಾಗತ ಹೇಗಿತ್ತು? ಅದ್ರ ರಹಸ್ಯವೇನು? - Mahanayaka
5:23 PM Monday 16 - September 2024

ಬ್ರೂನೈ ದೇಶದಲ್ಲಿ ಪ್ರಧಾನಿ ಮೋದಿ: ಮುಸ್ಲಿಂ ರಾಜನ ಅರಮನೆಯಲ್ಲಿ ನಮೋಗೆ ಸ್ವಾಗತ ಹೇಗಿತ್ತು? ಅದ್ರ ರಹಸ್ಯವೇನು?

06/09/2024

ಬ್ರೂನೈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೊನ್ನೆ ಮೊನ್ನೆ ಎರಡು ದಿನಗಳ ಭೇಟಿ ಕೊಟ್ಟದ್ದು ನಿಮಗೆ ಗೊತ್ತಿರಬಹುದು. ಅವರಿಗೆ ಅಲ್ಲಿನ ದೊರೆ ಹಸನುಲ್ ಬೋಲ್ಕಿಯ ಅವರ ಇಸ್ತಾನ್ ನೂರುಲ್ ಈಮಾನ್ ಅರಮನೆಯಲ್ಲಿ ಭವ್ಯ ಸ್ವಾಗತವನ್ನು ನೀಡಲಾಗಿತ್ತು. ಇದೀಗ ಆ ಅರಮನೆಯ ವೈಭವವನ್ನು ವಿವರಿಸುವ ಮಾಹಿತಿಗಳು ಬಿಡುಗಡೆಯಾಗಿವೆ.

ಇಸ್ಲಾಮಿಕ್ ಮತ್ತು ಮಲಯ ವಾಸ್ತು ಶಿಲ್ಪದಂತೆ ರಚಿಸಲಾಗಿರುವ ಈ ಅರಮನೆಯನ್ನು 21 52 782 ಚದರ ಮೀಟರ್ ನಲ್ಲಿ ಕಟ್ಟಲಾಗಿದೆ. ಬೆಳಕಿನ ಅರಮನೆ ಎಂದು ಕರೆಯಲ್ಪಡುವ ಈ ಅರಮನೆಯನ್ನು ನಿರ್ಮಿಸುವುದಕ್ಕೆ 10,000 ಕೋಟಿ ರೂಪಾಯಿ ಖರ್ಚಾಗಿದೆ ಎಂದು ವರದಿಯಾಗಿದೆ. 1984ರಲ್ಲಿ ಅರಮನೆಯ ಕೆಲಸ ಪೂರ್ತಿಯಾಗಿದೆ. ಇದರ ವಿನ್ಯಾಸವನ್ನು ಫಿಲಿಪಿನ್ಸ್ ನ ಲಿಯೋನಾರ್ಡೂ ಲೋಕ್ಸಿನ ಎಂಬವ ತಯಾರಿಸಿದ್ದಾನೆ.

1288 ಕೋಣೆಗಳು ಈ ಅರಮನೆಯಲ್ಲಿದ್ದು 257 ಬಾತ್ರೂಮ್‌ಗಳಿವೆ. ಚಿನ್ನ ಮತ್ತು ರತ್ನದಿಂದ ಮಾಡಲಾದ ಅಲಂಕಾರ, 1500 ಮಂದಿಗೆ ಒಂದೇ ಸಮಯದಲ್ಲಿ ನಮಾಜ್ ಮಾಡುವುದಕ್ಕೆ ಬೇಕಾದ ಮಸೀದಿ, 5000 ಮಂದಿಗೆ ಒಂದೇ ಸಮಯದಲ್ಲಿ ಭೋಜನ ಮಾಡುವ ಕೊಠಡಿ ಇತ್ಯಾದಿಗಳು ಈ ಅರಮನೆಯಲ್ಲಿವೆ. 38 ರೀತಿಯ ಮಾರ್ಬಲ್‌ಗಳನ್ನು ಈ ಅರಮನೆಗಾಗಿ ಉಪಯೋಗಿಸಲಾಗಿದೆ.


Provided by

ರೋಲ್ಸ್ ರಾಯ್ಸ್, ಫೆರಾರಿ ಮುಂತಾದ ಅತ್ಯಾಧುನಿಕ ಕಾರುಗಳ ಸಂಗ್ರಹವೂ ಈ ಅರಮನೆಯಲ್ಲಿದೆ. ಇವುಗಳಿಗಾಗಿ ಎಂದೇ 110 ಗ್ಯಾರೇಜುಗಳೂ ಇವೆ.. ದೊರೆಯ ಮಗಳ ಮದುವೆ ಗಾಗಿ ಕೇವಲ ಚಿನ್ನದಿಂದಲೇ ಮಾಡಲಾದ ರೋಲ್ಸ್ ರಾಯ್ ಕಾರನ್ನು ಬಳಸಲಾಗಿತ್ತು. ಖಾಸಗಿ ಮೃಗಾಲಯ ಮತ್ತು ಅನೇಕ ಸ್ವಿಮ್ಮಿಂಗ್ ಪೂಲ್ ಗಳು ಈ ಅರಮನೆಯಲ್ಲಿ ಇವೆ. ಬ್ರೂನೈಯನ್ನು ಈ ರಾಜ ಕಳೆದ 57 ವರ್ಷಗಳಿಂದ ಆಳುತ್ತಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ