ಈಜಿಪ್ಟ್ ನಲ್ಲಿ ಪ್ರಧಾನಿ ನಮೋ: ಕೈರೋದ ಐತಿಹಾಸಿಕ ಅಲ್ ಹಕೀಂ ಮಸೀದಿಗೆ ಮೋದಿ ಭೇಟಿ; ಇದರ ಹಿಂದಿರುವ ಉದ್ದೇಶ ಏನು..?
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಜಿಪ್ಟ್ ಪ್ರಧಾನಿ ಮುಸ್ತಫಾ ಮಡ್ಬೌಲಿ ಮತ್ತು ಉನ್ನತ ಕ್ಯಾಬಿನೆಟ್ ಸಚಿವರ ಜೊತೆಗೆ ವ್ಯಾಪಾರ ಸಂಬಂಧಗಳನ್ನು ವೃದ್ದಿಗೊಳಿಸುವ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚಿಸುವ ಮೂಲಕ ತಮ್ಮ ಮೊದಲ ಈಜಿಪ್ಟ್ ಭೇಟಿಯನ್ನು ಪ್ರಾರಂಭಿಸಿದರು.
ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ ಸಿಸಿ ಅವರ ಆಹ್ವಾನದ ಮೇರೆಗೆ ಮೋದಿ ಈಜಿಪ್ಟ್ ಗೆ ಭೇಟಿ ನೀಡಿದರು. ಇದು 26 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್ ಗೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ.
ಪ್ರಧಾನಮಂತ್ರಿಯವರು ಈಜಿಪ್ಟ್ ನ ಗ್ರ್ಯಾಂಡ್ ಮುಫ್ತಿ ಡಾ. ಶಾಕಿ ಇಬ್ರಾಹಿಂ ಅಬ್ದುಲ್ ಕರೀಮ್ ಅಲ್ಲಮ್ ಅವರನ್ನು ಭೇಟಿ ಮಾಡಿದರು. ಜೊತೆಗೆ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದರು. ಅಲ್ಲದೇ ಭಾರತೀಯ ವಲಸಿಗರು ಮತ್ತು ಬೋಹ್ರಾ ಸಮುದಾಯದ ಸದಸ್ಯರನ್ನು ಸಹ ಭೇಟಿ ಮಾಡಿದರು.
ಭಾರತದ ದಾವೂದಿ ಬೋಹ್ರಾ ಸಮುದಾಯದ ಸಹಾಯದಿಂದ ಪುನಃಸ್ಥಾಪಿಸಲಾದ ಕೈರೋದ ಐತಿಹಾಸಿಕ ಅಲ್-ಹಕೀಮ್ ಮಸೀದಿಗೆ ಭಾನುವಾರ ಭೇಟಿ ನೀಡುವ ಮೊದಲು ಬೋಹ್ರಾ ಸಮುದಾಯದ ಸದಸ್ಯರೊಂದಿಗೆ ಪ್ರಧಾನಿ ಸಭೆ ನಡೆಸಿದರು. ಭಾರತದಲ್ಲಿನ ಬೋಹ್ರಾ ಸಮುದಾಯವು ವಾಸ್ತವವಾಗಿ ಫಾತಿಮಾ ರಾಜವಂಶದಿಂದ ಹುಟ್ಟಿಕೊಂಡಿತ್ತು. ಇವರು 1970 ರ ದಶಕದಲ್ಲಿ ಮಸೀದಿಯನ್ನು ನವೀಕರಿಸಿದ್ದರು.
26 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್ ಗೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಇದಕ್ಕೂ ಮುನ್ನ, ಈಜಿಪ್ಟ್ ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಅಪ್ಪುಗೆಯೊಂದಿಗೆ ಸ್ವಾಗತಿಸಿದರು. ಇದೇ ವೇಳೆ ಔಪಚಾರಿಕ ಸ್ವಾಗತ ಮತ್ತು ಗಾರ್ಡ್ ಆಫ್ ಹಾನರ್ ನೀಡಲಾಯಿತು.
‘ಈ ಭೇಟಿಯು ಈಜಿಪ್ಟ್ ಜೊತೆಗಿನ ಭಾರತದ ಸಂಬಂಧವನ್ನು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ’ ಎಂದು ಕೈರೋದಲ್ಲಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw