ಪ್ಯಾರಿಸ್ ಪ್ರವಾಸ ಹೊರಟ ಪ್ರಧಾನಿ ಮೋದಿ: ಅರಮನೆಯಲ್ಲಿ ಅದ್ದೂರಿ ಔತಣಕೂಟ

ಎಐ ಶೃಂಗಸಭೆಗೆ ಮುಂಚಿತವಾಗಿ ಪ್ಯಾರಿಸ್ ಗೆ ಪ್ರವಾಸ ಹೊರಟ ಪ್ರಧಾನಿ ನರೇಂದ್ರ ಮೋದಿಯವರನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಆತ್ಮೀಯವಾಗಿ ಬರಮಾಡಿಕೊಂಡರು. ಅಲ್ಲದೇ ಎಲಿಸೀ ಅರಮನೆಯಲ್ಲಿ ಸ್ವಾಗತ ಭೋಜನಕೂಟದಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಿದ್ದರು.
‘ಪ್ಯಾರಿಸ್ ಗೆ ಸ್ವಾಗತ, ನನ್ನ ಸ್ನೇಹಿತ ನರೇಂದ್ರ ಮೋದಿ’ ಎಂದು ಮ್ಯಾಕ್ರನ್ ಎಲಿಸೀ ಅರಮನೆಗೆ ಪ್ರಧಾನಿಯ ಆಗಮನದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ, ಪಿಎಂ ಮೋದಿ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸೇರಿದಂತೆ ಎಐ ಶೃಂಗಸಭೆಯಲ್ಲಿ ಭಾಗವಹಿಸುವ ಹಲವಾರು ವಿಶ್ವ ನಾಯಕರನ್ನು ಭೇಟಿ ಮಾಡಿದರು. ಕಳೆದ ತಿಂಗಳು ವ್ಯಾನ್ಸ್ ಅಧಿಕಾರ ವಹಿಸಿಕೊಂಡ ನಂತರ ಇದು ಇಬ್ಬರ ನಡುವಿನ ಮೊದಲ ಭೇಟಿಯಾಗಿದೆ. ಸ್ವಾಗತ ಔತಣಕೂಟದ ಸಮಯದಲ್ಲಿ ಮೂವರು ನಾಯಕರು ಸಂವಹನ ನಡೆಸುತ್ತಿರುವ ಫೋಟೋಗಳನ್ನು ಪ್ರಧಾನಿ ಕಚೇರಿ (ಪಿಎಂಒ) ಹಂಚಿಕೊಂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj