ಅಯೋಧ್ಯೆಯ ರಾಮಮಂದಿರ ನಿರ್ಮಾಣ ನಮ್ಮ ವಿಜಯದ ಸಂಕೇತ: ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
24/10/2023
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಸುದೀರ್ಘ ಕಾಯುವಿಕೆಯ ನಂತರ ನೋಡುವ ಭಾಗ್ಯ ನಮ್ಮದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ವಿಜಯ ದಶಮಿಯ ಪ್ರಯುಕ್ತ ಭಾಗವಹಿಸಿದ ಮೋದಿ ಅವರು ರಾವಣನ ಪ್ರತಿಕೃತಿ ದಹನ ಮಾಡಿದರು. ನಂತರ ಮಾತನಾಡಿದ ಅವರು, ದೀರ್ಘಕಾಲದ ಕಾಯುವಿಕೆಯ ನಂತರ ಅಯೋಧ್ಯೆಯಲ್ಲಿ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದನ್ನು ಇಂದು ನೋಡುವ ಭಾಗ್ಯ ನಮ್ಮದಾಗಿದೆ. ಇದು ನಮ್ಮ ತಾಳ್ಮೆಯ ಹಾಗೂ ವಿಜಯದ ಸಂಕೇತವಾಗಿದೆ ಎಂದರು.
ವಿಜಯದಶಮಿಯಂದು ಶಾಸ್ತ್ರ ಪೂಜೆಯ ಸಂಪ್ರದಾಯವೂ ಇದೆ. ಭಾರತದ ನೆಲದಲ್ಲಿ, ಆಯುಧಗಳನ್ನು ಪೂಜಿಸುವುದು ಯಾವುದೇ ಭೂಮಿ ಮೇಲೆ ಪ್ರಾಬಲ್ಯ ಸಾಧಿಸಲು ಅಲ್ಲ.ಆದರೆ ತನ್ನದೇ ಭೂಮಿಯನ್ನು ರಕ್ಷಿಸಲು ಎಂದರು. ನಮ್ಮ ಶಕ್ತಿ ಪೂಜೆಯು ನಮಗಾಗಿ ಮಾತ್ರವಲ್ಲ, ಇಡೀ ಪ್ರಪಂಚದ ಕಲ್ಯಾಣಕ್ಕಾಗಿ ಎಂದರು.