ಪ್ರಧಾನಿ ಮೋದಿ, ಸ್ಮೃತಿ ಇರಾನಿ ಫೋಟೋ ವಿಚಾರ: ವೈರಲ್ ಫೋಟೋದ ಸತ್ಯಾಸತ್ಯತೆ ಬಯಲು
ಪ್ರಧಾನಿ ಮೋದಿ ಅವರನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಪ್ಪಿಕೊಂಡಿರುವಂತೆ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದೀಗ ಈ ಚಿತ್ರದ ಅಸಲಿಯತ್ತು ಫ್ಯಾಕ್ಟ್ ಚೆಕ್ ಮೂಲಕ ಬಯಲಾಯಗಿದೆ.
ವೈರಲ್ ಆಗಿರುವ ಚಿತ್ರದ ಸತ್ಯಾಸತ್ಯತೆ ಪರಿಶೀಲಿಸಲು ಫ್ಯಾಕ್ಟ್ ಲಿ ಡಾಟ್ ಇನ್ ತಂಡವು ರಿವರ್ಸ್ ಇಮೇಜ್ ತಂತ್ರಜ್ಞಾನ ಬಳಸಿಕೊಂಡು ಫೋಟೋದ ಹುಡುಕಾಟ ನಡೆಸಿದಾಗ ಈ ಫೋಟೋ ಪೋಸ್ಟ್ ಮಾಡಿರುವ ಸಾಮಾಜಿಕ ಜಾಲತಾಣದ ಲಿಂಕ್ ಪತ್ತೆಯಾಯಿತು.
ಸ್ಮೃತಿ ಇರಾನಿ ಅವರು ತಮ್ಮ ಮಗಳ ಜೊತೆಗೆ ಆತ್ಮೀಯವಾಗಿ ತೆಗೆದುಕೊಂಡಿರುವ ಫೋಟೋ ಇದರ ಅಸಲಿ ಫೋಟೋವಾಗಿದೆ. ಆದರೆ ಕಿಡಿಗೇಡಿಗಳು ಈ ಫೋಟೋವನ್ನು ಪ್ರಧಾನಿ ಮೋದಿ ಫೋಟೋ ಜೊತೆಗೆ ಅಸಭ್ಯವಾಗಿ ಚಿತ್ರಿಸಿ ವೈರಲ್ ಮಾಡಿರುವುದು ಪತ್ತೆಯಾಗಿದೆ.
ಡಿಜಿಟಲ್ ತಂತ್ರಜ್ಞಾನ ಬಳಸಿ ಈ ಫೋಟೋವನ್ನು ತಿರುಚಲಾಗಿದೆ. ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದೊಂದು ಎಡಿಟ್ ಮಾಡಲಾದ ಫೋಟೋ ಎಂದು ಗುರುತು ಹಿಡಿಯಬಹುದು. ಆದರೆ ಸಾಕಷ್ಟು ಅಮಾಯಕರು ಇಂತಹ ಫೋಟೋಗಳನ್ನು ನಿಜ ಎಂದೇ ನಂಬಿ ಬಿಡುತ್ತಾರೆ. ತಂತ್ರಜ್ಞಾನಗಳ ದುರ್ಬಳಕೆ ವ್ಯಕ್ತಿಗಳ ಚಾರಿತ್ರ್ಯಹರಣಕ್ಕೆ ಬಳಕೆಯಾಗುತ್ತಿರುವುದು ವಿಷಾದನೀಯ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth