ಚಂದ್ರಯಾನ 3 ಸಕ್ಸಸ್: ಗ್ರೀಸ್ ಪ್ರವಾಸದಿಂದ ನೇರವಾಗಿ ಬೆಂಗಳೂರಿಗೆ ಬರುತ್ತಾರಂತೆ ಪ್ರಧಾನಿ ಮೋದಿ

25/08/2023

ಇಸ್ರೋ ನೇತೃತ್ವದಲ್ಲಿ ನಡೆದ ಚಂದ್ರಯಾನ-3 ಸಕ್ಸಸ್ ಆಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಶುಭಾಶಯ ಕೋರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬ್ರಿಕ್ಸ್ ಸಮಾವೇಶದ ಹಿನ್ನಲೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ.

ಆಗಸ್ಟ್ 26 ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಲಿದ್ದಾರೆ. ಶನಿವಾರ ಸಾಯಂಕಾಲ 6 ಗಂಟೆಗೆ ಪ್ರಧಾನಿ ಮೋದಿ ಅವರ ಇಸ್ರೋ ಭೇಟಿಗೆ ಸಮಯ ನಿಗದಿಯಾಗಿದೆ. ತಮ್ಮ ಗ್ರೀಸ್ ಪ್ರವಾಸದಿಂದ ನೇರವಾಗಿ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿಳಿಯಲಿದ್ದಾರೆ.

ಬಳಿಕ ಅಲ್ಲಿಂದ ನೇರವಾಗಿ ಇಸ್ರೋಗೆ ತೆರಳಲಿರುವ ಪ್ರಧಾನಿಯವರು ಅಲ್ಲಿ ದೇಶದ ಹೆಮ್ಮೆಯ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ. ಚಂದ್ರನ ಮೇಲೆ ಇಸ್ರೋ ಲ್ಯಾಂಡರ್ ವಿಕ್ರಮ್ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗುತ್ತಿದ್ದಂತೆಯೇ ಇಸ್ರೋ ವಿಜ್ಞಾನಿಗಳನ್ನುದ್ದೇಶಿಸಿ ಪ್ರಧಾನಿ ಮೋದಿ ಅವರು ವರ್ಚ್ಯುವಲ್ ವಿಡಿಯೋ ಮೂಲಕ ದಕ್ಷಿಣ ಆಫ್ರಿಕಾದಿಂದಲೇ ಮಾತನಾಡಿ ಅಭಿನಂದಿಸಿದ್ದರು.

 

ಮಾತ್ರವಲ್ಲದೇ ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ಆ ಬಳಿಕ ಖುದ್ದು ಕರೆ ಮಾಡಿ ಪ್ರಧಾನಿ ಅವರು ಈ ಸಾಧನೆಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದರು.

ಇತ್ತೀಚಿನ ಸುದ್ದಿ

Exit mobile version