ಪ್ರಧಾನಿ ಮೋದಿಗೆ ಆರೋಪಿ ಬೆದರಿಕೆ ಹಾಕಿದ್ದು ಯಾಕೆ? | ವಿಚಾರಣೆ ವೇಳೆ ಆತ ಹೇಳಿದ್ದೇನು ಗೊತ್ತಾ?
ನವದೆಹಲಿ: ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ 22 ವರ್ಷ ವಯಸ್ಸಿನ ಯುವಕನನ್ನು ಈಶಾನ್ಯ ದೆಹಲಿಯ ಖಜುರಿ ಖಾಸ್ ಪ್ರದೇಶದಲ್ಲಿ ಬಂಧಿಸಲಾಗಿದೆ.
ಸಲ್ಮಾನ್ ಅಲಿಯಾಸ್ ಅರ್ಮಾನ್ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ಮಾದಕ ವ್ಯಸನಿಯಾಗಿದ್ದು, ಬಾಲಾಪರಾಧಿಗಳ ಪರಿವರ್ತನಾ ಕೇಂದ್ರದಿಂದ ಬಿಡುಗಡೆ ಮಾಡಲಾಗಿತ್ತು. ಅವನನ್ನು 2018 ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಆತ ಜೈಲಿನಲ್ಲಿದ್ದ ಎಂದು ಅವರು ತಿಳಿಸಿದ್ದಾರೆ.
ಕರೆ ಮಾಡುವ ಸಮಯದಲ್ಲಿ ಸಲ್ಮಾನ್ ಡ್ರಗ್ಸ್ ಪ್ರಭಾವಕ್ಕೆ ಒಳಗಾಗಿದ್ದ. ರಾತ್ರಿ 10 ರ ಸುಮಾರಿಗೆ ಆತನ ತಂದೆ ಅವನಿಗೆ ಗದರಿದ್ದರು ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ, ಜೈಲಿಗೆ ಹೋಗಲು “ಬಯಸಿದ್ದರಿಂದ” ಕರೆ ಮಾಡಿದ್ದಾಗಿ ಆ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.
ಇನ್ನೂ ಈ ಸಂಬಂಧ ಆರೋಪಿಯ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳುವ ಮೊದಲು ದೆಹಲಿ ಪೊಲೀಸರ ಹಿರಿಯ ಅಧಿಕಾರಿಗಳು ಪ್ರೋಟೋಕಾಲ್ ಪ್ರಕಾರ ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಗಳೊಂದಿಗೆ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.