ಚೀನಾ ರೋಡ್ ತೋರ್ಸಿ ಸುಳ್ಳು ಮಾಹಿತಿ ಹಂಚಿಕೆ: ಮೋದಿ ಬೆಂಬಲಿಗರ ಅಸಲಿಯತ್ತು ಬಟಬಯಲು
ಕಾಶ್ಮೀರದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ‘ರಾಷ್ಟ್ರೀಯ ಹೆದ್ದಾರಿ 14’ ಎಂಬ ಹೆಸರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಹಂಚಿಕೆಯಾಗುತ್ತಿರುವ ವಿಡಿಯೋ ಒಂದನ್ನು ನೀವು ನೋಡಿರಬಹುದು. ಕಾಶ್ಮೀರದ 370 ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಮೋದಿ ಸರ್ಕಾರ ಕಾಶ್ಮೀರದಲ್ಲಿ ಭಾರಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ, ಕಾಶ್ಮೀರದ ನಕ್ಷೆಯನ್ನೇ ಅಭಿವೃದ್ಧಿಯ ಮೂಲಕ ಬದಲಿಸುತ್ತಿದೆ ಎಂಬೆಲ್ಲಾ ಒಕ್ಕಣೆಯೊಂದಿಗೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ನಿಜ ವಿಷಯವನ್ನು ಕೇಳಿದರೆ ನೀವು ಕೂಡ ಬೆರಗಾಗುತ್ತೀರಿ.
ಆದರೆ ಈ ವಿಡಿಯೋದಲ್ಲಿರುವ ಹೆದ್ದಾರಿ ಭಾರತದಲ್ಲ, ಚೈನಾದ್ದು. ಚೈನಾದ ಜಿಶೀ ಎಂಬಲ್ಲಿಯ ಐಸಾಯಿ ರಸ್ತೆಯನ್ನೇ ಸೋಶಿಯಲ್ ಮೀಡಿಯಾದಲ್ಲಿ ಕೇಂದ್ರ ಸರಕಾರದ ಬೆಂಬಲಿಗರು ಕಾಶ್ಮೀರದ ಹೆದ್ದಾರಿ ಎಂದು ಹೇಳಿ ಹಂಚಿಕೊಳ್ಳುತ್ತಿದ್ದಾರೆ ಅನ್ನುವುದು ಫ್ಯಾಕ್ಟ್ ಚೆಕ್ ಮೂಲಕ ಬಹಿರಂಗವಾಗಿದೆ. ದಿ ಕ್ವಿ0ಟ್, ಇಂಡಿಯಾ ಟುಡೇ ಮುಂತಾದ ಫ್ಯಾಕ್ಟ್ ಚೆಕಿಂಗ್ ವೆಬ್ ಸೈಟ್ ಗಳು ಈ ಸತ್ಯವನ್ನು ಬಹಿರಂಗಪಡಿಸಿವೆ.
ಈಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ವು ಮಧ್ಯ ಚೈನಾದಲ್ಲಿ ಅತೀ ಎತ್ತರದ ಮತ್ತು ಉದ್ದದ ಹೆದ್ದಾರಿಯಾಗಿ ಗುರುತಿಸಿಕೊಂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj