ದೆಹಲಿಯಲ್ಲಿ ಮತದಾನ: ಮಹಾಕುಂಭಮೇಳದಲ್ಲಿ ಮೋದಿ ಸ್ನಾನ
ದೆಹಲಿಯಲ್ಲಿ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಗ್ ರಾಜ್ ಗೆ ತೆರಳಿ ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಿದ್ದಾರೆ. ಹಾಗೆಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆ ಸೇರಿ ಗಂಗಾ ತೀರದಲ್ಲಿ ಪೂಜೆ ನಡೆಸಿದ್ದಾರೆ.
ದೆಹಲಿಯಲ್ಲಿ ಮತದಾನ ಪ್ರಕ್ರಿಯೆ ಜೋರಾಗುತ್ತಿದ್ದಂತೆಯೇ ಬೆಳಿಗ್ಗೆ 11 ಗಂಟೆಗೆ ನರೇಂದ್ರ ಮೋದಿಯವರು ಈ ಪುಣ್ಯ ಸ್ನಾನ ಮಾಡಿದ್ದಾರೆ. ಜನವರಿ 13ರಂದು ಕುಂಭಮೇಳ ಆರಂಭವಾಗಿದೆ. ಆದರೆ ಪ್ರಧಾನಿ ಈವರೆಗೆ ಅಲ್ಲಿಗೆ ಹೋಗಿರಲಿಲ್ಲ.
ದೆಹಲಿ ಚುನಾವಣಾ ಪ್ರಚಾರದವೇಳೆ ಬಿಜೆಪಿ ಕುಂಭಮೇಳವನ್ನು ಸಾಕಷ್ಟು ಬಳಕೆ ಮಾಡಿಕೊಂಡಿತ್ತು. ಈ ನಡುವೆ ಕಾಲ್ತುಳಿತಕ್ಕೆ ಹಲವು ಮಂದಿ ಪ್ರಾಣ ಕಳೆದುಕೊಂಡರು. ಇದು ಬಿಜೆಪಿಯ ಕುಂಭಮೇಳದ ಬಳಕೆಗೆ ಸಾಕಷ್ಟು ಅಡ್ಡ ಪರಿಣಾಮವನ್ನು ಬಿರಿತ್ತು. ಇದನ್ನು ಮರೆಸುವುದಕ್ಕಾಗಿ ಅವರು ಮತದಾನದ ವೇಳೆ ಕುಂಭಮೇಳಕ್ಕೆ ತೆರಳಿ ಸ್ನಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj