ಸೋನಿಯಾ ಗಾಂಧಿಗೆ ಬರ್ತ್ ಡೇ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ
78ನೇ ಜನ್ಮದಿನವನ್ನು ಆಚರಿಸುತ್ತಿರುವ ಸೋನಿಯಾ ಗಾಂಧಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಶ್ರೀಮತಿ ಸೋನಿಯಾ ಗಾಂಧಿಯವರಿಗೆ ಜನ್ಮದಿನದ ಶುಭಾಶಯಗಳು. ಅವರ ದೀರ್ಘಾಯುಷ್ಯ ಆಯುರಾರೋಗ್ಯ ಮತ್ತು ಸೌಖ್ಯಕ್ಕಾಗಿ ನಾನು ಪ್ರಾರ್ಥಿಸುವೆ ಎಂದು ಎಕ್ಸ್ ಜಾಲತಾಣದಲ್ಲಿ ಮಾಡಿದ ಪೋಸ್ಟ್ ನಲ್ಲಿ ಪ್ರಧಾನಿ ಹಾರೈಸಿದ್ದಾರೆ.
ಇಟಲಿಯ ಸಾಮಾನ್ಯ ಕುಟುಂಬದ ಹೆಣ್ಣು ಮಗಳೊಬ್ಬಳು ಭಾರತೀಯ ರಾಜಕಾರಣದ ನಿರ್ಣಾಯಕ ಸ್ಥಾನಕ್ಕೆ ಏರಿರುವುದು ಅಭೂತಪೂರ್ವ ಬೆಳವಣಿಗೆಯಾಗಿದೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದ ವೇಳೆ ಈ ಸೋನಿಯಾರಿಗೆ ರಾಜೀವ್ ಗಾಂಧಿಯವರ ಪರಿಚಯವಾಯಿತು ಮತ್ತು ಅದು ಮದುವೆಗೂ ಕಾರಣವಾಯಿತು.
ರಾಜೀವ್ ಗಾಂಧಿಯವರ ಹತ್ಯೆಯ ಬಳಿಕ ಅವರು ಕಾಂಗ್ರೆಸ್ ಪಕ್ಷದ ನಿರ್ಣಾಯಕ ಸ್ಥಾನವನ್ನು ಪಡೆದರು. 1998ರಲ್ಲಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು. 2004 ಮತ್ತು 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ವಿಜಯದೆಡೆಗೆ ಕೊಂಡೊಯ್ದರು. 2007, 2010 ಮತ್ತು 2013ರ ಫೋರ್ಬ್ಸ್ ಮಾಸಿಕ ಪತ್ರಿಕೆಯಲ್ಲಿ ಇವರು ಸ್ಥಾನ ಪಡೆಯುವಷ್ಟು ಮಹತ್ವದ ಮಹಿಳಾ ಮಣಿಯಾಗಿ ಗುರುತಿಸಿಕೊಂಡರು.
2014ರ ಲೋಕಸಭಾ ಚುನಾವಣೆಯ ವೇಳೆ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರಿಂದ ತೀವ್ರ ವೈಯಕ್ತಿಕ ದಾಳಿಯನ್ನು ಎದುರಿಸಿದರು ಮತ್ತು ಆ ಬಗೆಯ ಭಾಷಣಗಳು ಆ ದಿನಗಳಲ್ಲಿ ಹೊಸದಾಗಿತ್ತು. ಆ ಬಳಿಕ ನರೇಂದ್ರ ಮೋದಿಯವರು ಪ್ರಧಾನಿಯಾದರು ಮತ್ತು ಪ್ರಧಾನಿಯಾದ ಬಳಿಕವೂ ಅವರು ಸೋನಿಯಾ ಗಾಂಧಿಯವರನ್ನು ತೀವ್ರವಾಗಿ ಟೀಕಿಸಿ ಅನೇಕ ಬಾರಿ ಭಾಷಣ ಮಾಡಿದರು. ಬಿಜೆಪಿ ಬೆಂಬಲಿಗರಂತೂ ಸೋನಿಯಾ ಗಾಂಧಿಯನ್ನು ಅತ್ಯಂತ ನಿಂದನಾತ್ಮಕ ಮತ್ತು ಕೀಳು ಮಟ್ಟದ ಆರೋಪಕ್ಕೆ ಗುರಿಯಾಗಿಸುತ್ತಿರುವ ಈ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೋನಿಯಾ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿರುವುದು ಅವರ ಬೆಂಬಲಿಗರಿಗೆ ನುಂಗಲಾರದ ತುತ್ತಾಗುವ ಸಾಧ್ಯತೆ ಇದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj