ಟಾಂಗ್: ಕಾಂಗ್ರೆಸ್‌ ನಿರ್ಮಿಸಿದ ಶಾಲೆಯಲ್ಲಿ ಕಲಿತು ಮೋದಿ ಪ್ರಧಾನಿ, ಅಮಿತ್ ಶಾ ಮಂತ್ರಿಯಾಗಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಎದಿರೇಟು - Mahanayaka
1:23 AM Thursday 12 - December 2024

ಟಾಂಗ್: ಕಾಂಗ್ರೆಸ್‌ ನಿರ್ಮಿಸಿದ ಶಾಲೆಯಲ್ಲಿ ಕಲಿತು ಮೋದಿ ಪ್ರಧಾನಿ, ಅಮಿತ್ ಶಾ ಮಂತ್ರಿಯಾಗಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಎದಿರೇಟು

14/08/2023

70 ವರ್ಷಗಳಲ್ಲಿ ಕಾಂಗ್ರೆಸ್ ದೇಶದಲ್ಲಿ ಏನು ಮಾಡಿದೆ ಎಂದು ಬಿಜೆಪಿ ಪ್ರಶ್ನೆ ಮಾಡಿತ್ತು. ಇದಕ್ಕೆ ತೀಕ್ಷ್ಣ ಉತ್ತರ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಮಂತ್ರಿ, ಪ್ರಧಾನಿಯಾಗಲು ಕಾಂಗ್ರೆಸ್‌ ಪಕ್ಷವೇ ಕಾರಣ. ಕಾಂಗ್ರೆಸ್‌ ನಿರ್ಮಿಸಿದ ಶಾಲೆಯಲ್ಲಿಯೇ ಕಲಿತು ಅವರು ಈವರೆಗೆ ಬೆಳೆದಿದ್ದಾರೆ ಎಂದು ಟಾಂಗ್‌ ನೀಡಿದ್ದಾರೆ.

ಅವರೇನು ಲಂಡನ್‌ನಲ್ಲಿ ಓದಲು ಹೋಗಿದ್ರೆ..? 70 ವರ್ಷಗಳಲ್ಲಿ ನಾವು ನಿರ್ಮಿಸಿ ಕೊಟ್ಟ ಶಾಲೆಯಲ್ಲಿಯೇ ಕಲಿತು ಅಮಿತ್‌ ಶಾ, ನರೇಂದ್ರ ಮೋದಿ ಅವರು ಶಾಸಕ, ಮಂತ್ರಿ, ಪ್ರಧಾನಿಯಾಗಿದ್ದಾರೆ. ನಿಮಗೆ ಶಿಕ್ಷಣ ಕಲಿಸಿಕೊಟ್ಟು ನಿಮ್ಮನ್ನು ಮಂತ್ರಿ-ಮುಖ್ಯಮಂತ್ರಿ ಮಾಡಿ ಈಗ ಪ್ರಧಾನಿಯನ್ನಾಗಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಮಣಿಪುರ ವಿಚಾರದಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಣಿಪುರದ ಬಗ್ಗೆ ಮೋದಿ ಸಂಸತ್ತಿನಲ್ಲಿ ಏನನ್ನೂ ಹೇಳುವುದಿಲ್ಲ. ಮೋದಿ ನಾಟಕ ಕಂಪನಿಯ ಬದಲು ತಪ್ಪಾಗಿ ಸಂಸತ್ತಿಗೆ ಬಂದಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಮಣಿಪುರದಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 5 ಸಾವಿರಕ್ಕೂ ಹೆಚ್ಚು ಮನೆಗಳು ಸುಟ್ಟು ಕರಕಲಾಗಿವೆ. ದೇಶದ ಪ್ರಧಾನಿ ಬಾಯಿ ತೆರೆಯಬೇಕು. ಸಂಸತ್ತಿಗೆ ಬಂದು ಮಣಿಪುರದ ಬಗ್ಗೆ ಮಾತನಾಡಬೇಕೆಂದು ನಾವು ಬಯಸಿದ್ದೆವು. ಆದರೆ ಅವರು ಅಲ್ಲಿಗೆ ಹೋಗಲಿಲ್ಲ ಎಂದು ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚಿನ ಸುದ್ದಿ