ದ್ವಿತೀಯ ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದಿಂದ 20,000 ರೂ. ವಿದ್ಯಾರ್ಥಿ ವೇತನ ಘೋಷಣೆ: ಅರ್ಜಿ ಹೇಗೆ ಸಲ್ಲಿಸಬೇಕು?
ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯೂ ದ್ವಿತೀಯ ಪಿಯುಸಿ ಪಾಸಾಗಿ ಪದವಿ ಶಿಕ್ಷಣ ಮುಂದುವರಿಸಲು ಸಹಾಯವಾಗವಂತೆ ವಿದ್ಯಾರ್ಥಿಗಳಿಗೆ 20,000 ರೂ. ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ.
ಯಾವುದು ಈ ವಿದ್ಯಾರ್ಥಿ ವೇತನ? ಯಾರು ಅರ್ಜಿ ಸಲ್ಲಿಸಬಹುದು? ಹೇಗೆ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ದಿನಾಂಕ ಯಾವಾಗ ಎಂಬ ಈ ವಿದ್ಯಾರ್ಥಿ ವೇತನ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನಿಮಗೆ ತಿಳಿಸಲಾಗಿದೆ.
ಯಾವುದು ಈ ವಿದ್ಯಾರ್ಥಿ ವೇತನ?:
ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪಾಸಾಗಿ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಮಾಡಲು ಸಹಾಯವಾಗುವಂತೆ ಜಾರಿಗೆ ತಂದಿರುವ ಈ ಯೋಜನೆಯ ಹೆಸರೇ “ಪಿ.ಎಂ.ಉಷಾ ವಿದ್ಯಾರ್ಥಿ ವೇತನ “.
PM Usha Scholarship 2024-25 : ಯಾರು ಅರ್ಜಿ ಸಲ್ಲಿಸಬಹುದು?
ಪ್ರಧಾನ ಮಂತ್ರಿ ಉಷಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಶೇ. 80ರಷ್ಟು ಅಂಕಗಳನ್ನು ಪಾಸಾಗಿ ಮೂರು ವರ್ಷಗಳ ಪದವಿ ಶಿಕ್ಷಣ ಮಾಡಲು ಸಿದ್ದರಿರಬೇಕು.
ವಿದ್ಯಾರ್ಥಿ ವೇತನ ಹೇಗೆ ಸಿಗಲಿದೆ?
ಪ್ರಧಾನ ಮಂತ್ರಿ ಉಷಾ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಮೊದಲ ಪದವಿ ಶೈಕ್ಷಣಿಕ ವರ್ಷದಲ್ಲಿ 12,000/- ರೂಪಾಯಿ ಹಾಗೂ ನಂತರದ ಎರಡು ವರ್ಷಕ್ಕೆ ತಲಾ 20,000 ರೂಪಾಯಿಯನ್ನು ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ನೀಡಲಿದೆ.
ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಬೇಕಾಗುವ ಅಗತ್ಯ ದಾಖಲಾತಿಗಳು : PM Usha Scholarship 2024-25
* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* 12ನೇ ತರಗತಿಯ ಹಾಗೂ 10ನೇ ತರಗತಿಯ ಅಂಕ ಪಟ್ಟಿಗಳು
* ಅಭ್ಯರ್ಥಿಯ ಫೋಟೋ
* ಪದವಿ ಶಿಕ್ಷಣಕ್ಕೆ ದಾಖಲಾಗುವ ದಾಖಲಾತಿಗಳು
ಹೇಗೆ ಅರ್ಜಿ ಸಲ್ಲಿಸಬಹುದು?
ಪ್ರಧಾನಮಂತ್ರಿಯ ಉಷಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರು ನಾವು ಕೆಳಗೆ ನೀಡಿರುವಂತಹ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಹರಿರುವ ಎಲ್ಲಾ ವಿದ್ಯಾರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ ಅಕ್ಟೋಬರ್ 31, 2024ರ ಒಳಗಾಗಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ : https://scholarships.gov.in/
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: