ಪುನೀತ್ ರಾಜ್ ಕುಮಾರ್ ಗೆ ವಿಶಿಷ್ಟ ರೀತಿಯಲ್ಲಿ ನಮನ ಸಲ್ಲಿಸಿದ ಕೆಎಂಎಫ್ - Mahanayaka

ಪುನೀತ್ ರಾಜ್ ಕುಮಾರ್ ಗೆ ವಿಶಿಷ್ಟ ರೀತಿಯಲ್ಲಿ ನಮನ ಸಲ್ಲಿಸಿದ ಕೆಎಂಎಫ್

nandini
31/12/2021

ಬೆಂಗಳೂರು: ಯಾವುದೇ ಗೌರವ ಧನ ಪಡೆಯದೇ ಕಳೆದ 10 ವರ್ಷಗಳಿಂದ ಕೆಎಂಎಫ್‌ ನ ಉತ್ಪನ್ನವಾದ ನಂದಿನಿ ಹಾಲಿನ ರಾಯಭಾರಿಯಾಗಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಇದೀಗ ಕೆಎಂಎಫ್ ವಿಶಿಷ್ಟ ರೀತಿಯಲ್ಲಿ  ನಮನ ಸಲ್ಲಿಸಿದೆ.

ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರವನ್ನು ಮುದ್ರಿಸುವ ಮೂಲಕ ಅಪ್ಪುಗೆ ವಿಶಿಷ್ಟ ರೀತಿಯಲ್ಲಿ ಕೆಎಂಎಫ್  ನಮನ ಸಲ್ಲಿಸಿದೆ.

ಡಾ.ರಾಜ್ ಕುಮಾರ್ ಅವರ ಹಾದಿಯಲ್ಲಿಯೇ ಪುನೀತ್ ರಾಜ್ ಕುಮಾರ್ ತಮ್ಮ ಜೀವನ ಪ್ರಯಾಣ ಮಾಡಿದರು. ಡಾ.ರಾಜ್​ ಕುಮಾರ್  ರೈತರ ಮೇಲಿನ ಕಳಕಳಿಯಿಂದ ನಂದಿನಿ ಉತ್ಪನ್ನಗಳ ಪರವಾಗಿ ಉಚಿತವಾಗಿ ಪ್ರಚಾರ ನಡೆಸಿದ್ದರು.

1990ರಲ್ಲಿ ನಂದಿನಿ ಹಾಲಿನಲ್ಲಿ ಪ್ರಚಾರ ರಾಯಭಾರಿಯಾಗಿ ಕಾಣಿಸಿಕೊಂಡಿದ್ದ ರಾಜ್ ಕುಮಾರ್ ಅಭಿನಯಿಸಿದ್ದ ಮೊದಲ ಮತ್ತು ಕಡೆಯ ನಟನೆಯ ಜಾಹೀರಾಗಿತ್ತು. ರಾಜ್ ಕುಮಾರ್ ಅವರ ಬಳಿಕ ಪುನೀತ್ ಕೂಡ ಅದೇ ಹಾದಿಯಲ್ಲಿ ಹೆಜ್ಜೆಯನ್ನಿಟ್ಟಿದ್ದರು.

2009ರಲ್ಲಿ  ಪುನೀತ್ ಕೂಡ ನಂದಿನಿ ಪರವಾಗಿ ಉಚಿತವಾಗಿ ಪ್ರಚಾರ ಮಾಡುವುದಾಗಿ ಹೇಳಿಕೊಂಡಿದ್ದರು.  ಅದರಂತೆ  ಅವರು ಕೆಎಂಎಫ್ ಜೊತೆ ಈ ಕುರಿತು ಒಪ್ಪಂದಕ್ಕೆ ಸಹಿ ಹಾಕಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹೊಸ ವರ್ಷಾಚರಣೆಗೆ ಬಜರಂಗದಳ ವಿರೋಧ

ಕ್ರಿಸ್ಮಸ್ ಆಚರಣೆಗೆ ಅಡ್ಡಿ:  ಬಜರಂಗದಳ ಕಾರ್ಯಕರ್ತರನ್ನು ತರಾಟೆಗೆತ್ತಿಕೊಂಡ ಮಹಿಳೆಯರು | ವಿಡಿಯೋ ವೈರಲ್

ಸಿಹಿ ಸುದ್ದಿ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ

ಅರುಣ್ ಸಿಂಗ್ ಮುಂದೆ ತನ್ನ ಬಯಕೆ ಹೇಳಿಕೊಂಡ ರೇಣುಕಾಚಾರ್ಯ

ಇತ್ತೀಚಿನ ಸುದ್ದಿ