ಕಾರಿನೊಳಗೆ ವಿಷ ಅನಿಲ ಲೀಕ್ ಮಾಡಿಕೊಂಡು ಸಾಫ್ಟ್ ವೇರ್ ಇಂಜಿನಿಯರ್ ಆತ್ಮಹತ್ಯೆ

ಬೆಂಗಳೂರು: ಅನಾರೋಗ್ಯದಿಂದ ಬೇಸತ್ತ ವ್ಯಕ್ತಿಯೊಬ್ಬರು ಸುಮಾರು 3 ಕೆ.ಜಿ.ಯಷ್ಟು ನೈಟ್ರೋಜನ್ ಸಿಲಿಂಡರ್ ನ್ನು ಕಾರಿನೊಳಗೆ ಲೀಕ್ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಿವಾಸಿ ವಿಜಯ್ ಕುಮಾರ್(51) ಎಂಬವರು ಆತ್ಮಹತ್ಯೆಗೆ ಶರಣಾಗಿರುವವರಾಗಿದ್ದಾರೆ. ಇವರು ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಹಿರಿಯ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಕುರುಬರಹಳ್ಳಿ ಜಂಕ್ಷನ್ ಬಳಿಯಲ್ಲಿ ಕಾರು ನಿಲ್ಲಿಸಿರುವ ವಿಜಯ್ ಕುಮಾರ್ ಅವರು ಕಾರಿಗೆ ಹೊದಿಕೆ ಹಾಕಿ, ಕಾರಿನ ಗ್ಲಾಸ್ ಗಳನ್ನು ಮುಚ್ಚಿ ನೈಟ್ರೋಜನ್ ಗ್ಯಾಸ್ ಸಿಲಿಂಡರ್ ಅನ್ನು ಲೀಕ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಕಾರಿನ ಹೊರಗಿನ ಗ್ಲಾಸ್ ಗೆ ಡೆತ್ ನೋಟ್ ಬರೆದಿಟ್ಟಿದ್ದು, ಯಾರು ಕೂಡ ಕಾರಿನ ಡೋರ್ ತೆರೆಯ ಬೇಡಿ ಒಳಗೆ ವಿಷ ಗಾಳಿ ಇದೆ. ಬಾಗಿಲು ತೆರೆದರೆ ನೀವು ತೊಂದರೆಗೀಡಾಗಬಹುದು, ನುರಿತ ತಂಡದವರೇ ಬಾಗಿಲು ಓಪನ್ ಮಾಡಲಿ ಎಂದು ಬರೆದುಕೊಂಡಿದ್ದಾರೆ.
ವಿಜಯ್ ಕುಮಾರ್ ಅವರು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದರು. ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಬಳಿಕವೂ ಬೇರೆ ಬೇರೆಯಾದ ಅನಾರೋಗ್ಯ ಕಾಡಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka