ಧಾರ್ಮಿಕ ನಾಯಕ ಕಾಳಿಚರಣ್ ಮಹಾರಾಜ್ ಮತ್ತೊಮ್ಮೆ ಅರೆಸ್ಟ್!
ಥಾಣೆ: ಮಹಾತ್ಮ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದ ಆರೋಪದ ಮೇಲೆ ಧಾರ್ಮಿಕ ನಾಯಕ ಕಾಳಿಚರಣ್ ಮಹಾರಾಜ್ ಅವರನ್ನು ಥಾಣೆ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬುಧವಾರ ರಾತ್ರಿ ಛತ್ತೀಸ್ ಗಢದ ರಾಜಧಾನಿ ರಾಯ್ ಪುರದಲ್ಲಿ ಬಂಧಿಸಲಾಗಿದ್ದು, ಇಂಥಹದ್ದೇ ಪ್ರಕರಣವೊಂದರಲ್ಲಿ ಅವರು ಈ ಹಿಂದೆ ಜೈಲು ಸೇರಿದ್ದರು.
ಟ್ರಾನ್ಸಿಟ್ ರಿಮ್ಯಾಂಡ್ ಆಧಾರದಲ್ಲಿ ಕಾಳಿಚರಣ್ ಮಹಾರಾಜ್ ನ್ನು ಥಾಣೆಗೆ ಕರೆದುಕೊಂಡು ಬರಲಾಗಿದ್ದು, ಇಂದು ಕೋರ್ಟ್ ಗೆ ಹಾಜರುಪಡಿಸಲಾಗುತ್ತಿದೆ ಎಂದು ನೌಪಾಡ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
2021ರ ಡಿ. 26ರಂದು ಛತ್ತೀಸ್ ಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಳಿಚರಣ್ ಮಹಾರಜ್ ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದೇ ಪ್ರಕರಣದಲ್ಲಿ ಅವರನ್ನು ಬಂಧಿಸಿ ಛತ್ತೀಸ್ ಗಢದ ಜೈಲಿನಲ್ಲಿರಿಸಲಾಗಿತ್ತು.
ಮಹಾರಾಷ್ಟ್ರದಲ್ಲಿಯೂ ಜ. 12ರಂದು ವಾರ್ಧ ಪೊಲೀಸರು ಅವರ ವಿರುದ್ಧ ಇಂಥದ್ದೇ ಪ್ರಕರಣ ದಾಖಲಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಂಗಳೂರು: ಮರುವಾಯಿ ಮೀನಿನ ಪದಾರ್ಥ ತಿಂದು ಹಲವರು ಅಸ್ವಸ್ಥ
ವೈದ್ಯಕೀಯ ಕೋರ್ಸ್: ಒಬಿಸಿಗಳಿಗೆ ಶೇ. 27, ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿಗೆ ಸುಪ್ರೀಂಕೋರ್ಟ್ ಅನುಮತಿ
ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯ ಹೊಸ ಆವೃತ್ತಿಯ ಯಶಸ್ವಿ ಪರೀಕ್ಷೆ
ಅಫ್ಘಾನಿಸ್ತಾನ: ಗುಂಡಿನ ದಾಳಿಗೆ ತಾಲಿಬಾನ್ ಕಮಾಂಡರ್, ಆತನ ಪುತ್ರ ಸೇರಿ 6 ಮಂದಿ ಸಾವು