ಗೆಸ್ಟ್ ಹೌಸ್‌ ನಲ್ಲಿ ಅಕ್ರಮವಾಗಿ ಮದ್ಯ ಸೇವಿಸುತ್ತಿದ್ದ 13 ಮಂದಿ ಪೊಲೀಸ್ ವಶಕ್ಕೆ

liquor
24/09/2023

ಮಲ್ಪೆ: ಗೆಸ್ಟ್ ಹೌಸ್‌ ನಲ್ಲಿ ಅಕ್ರಮವಾಗಿ ಮದ್ಯಪಾನ ಸೇವಿಸುತ್ತಿದ್ದ 13 ಮಂದಿಯನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬಡಾನಿಡಿಯೂರು ಗ್ರಾಮದ ಕದಿಕೆ ಎಂಬಲ್ಲಿ ಸೆ.23ರಂದು ರಾತ್ರಿ ವೇಳೆ ನಡೆದಿದೆ.

ವಶಕ್ಕೆ ಪಡೆದವರನ್ನು ಪ್ರಸಾದ್, ಲತೀಶ, ಪ್ರೀತಮ್, ರಂಜಿತ್, ಲೊಕೇಶ್, ಬಾಲರಾಜ್, ಪ್ರದೀಪ್, ಮಿಥುನ್, ಶರತ್, ಅಭಿ, ಸಂದೇಶ, ಅಜ್ಞೆಶ್, ಪರಶು ಎಂದು ಗುರುತಿಸಲಾಗಿದೆ.

ಇವರು ಸಂದೀಪ್ ಎಂಬವರ ಮಾಲಕತ್ವದ ಗೆಸ್ಟ್ ಹೌಸ್‌ನ ವರಾಂಡ ಮತ್ತು ರೂಮಿನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಸೇವಿಸುತ್ತಿ ದ್ದರೆನ್ನಲಾಗಿದೆ. ಇವರಿಂದ ವಿವಿಧ ಕಂಪೆನಿಗಳ ಮದ್ಯವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಇತ್ತೀಚಿನ ಸುದ್ದಿ

Exit mobile version