11:25 AM Wednesday 12 - March 2025

ಚಿನ್ನಾಭರಣ ಮಳಿಗೆಗೆ ನುಗ್ಗಿ ದರೋಡೆ: ‘ಕಳ್ಳ’ಪೊಲೀಸ್ ಸಹಿತ 6 ಆರೋಪಿಗಳ ಬಂಧನ!

23/11/2020

ಬೆಂಗಳೂರು: ಚಿನ್ನಾಭರಣ ತಯಾರಿಸುವ ಮಳಿಗೆಗೆ ನುಗ್ಗಿ ದರೋಡೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಠಾಣೆ ಪೊಲೀಸರು ಕಾಡುಗೋಡಿ ಠಾಣೆಯ ಕಾನ್‍ಸ್ಟೇಬಲ್ ನ್ನು ಬಂಧಿಸಿದ್ದು, ಇನ್ನೋರ್ವನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಕಾಡುಗೋಡಿ ಠಾಣೆಯ ಕಾನ್‍ಸ್ಟೇಬಲ್ ಅಶೋಕ್ ಬಂಧಿತ ಆರೋಪಿಯಾಗಿದ್ದಾನೆ. ಇಬ್ಬರು ಕಾನ್‍ಸ್ಟೇಬಲ್‍ಗಳು ಸೇರಿದಂತೆ 9 ಮಂದಿಪೊಲೀಸರು ಎಂದು ಹೇಳಿಕೊಂಡು ನ.11ರಂದು ರಾತ್ರಿ ನಗರ್ತ್‍ಪೇಟೆ ಚಿನ್ನಾಭರಣ ತಯಾರಿಸುವ ಮಳಿಗೆಗೆ ನುಗ್ಗಿ ಅಲ್ಲಿನ ಸಿಬ್ಬಂದಿಯನ್ನು ಬೆದರಿಸಿ 300 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದರು.

ಘಟನೆ ಸಂಬಂಧ ಮಳಿಗೆಯ ಮಾಲೀಕ ಕಾರ್ತಿಕ್ ಎಂಬುವರು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು. ಹಲಸೂರು ಗೇಟ್ ಠಾಣೆ ಪೊಲೀಸರು ಕಾನ್‍ಸ್ಟೇಬಲ್ ಸೇರಿದಂತೆ 6 ಮಂದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದು,  ಇನ್ನೊಬ್ಬ ಕಾನ್‍ ಸ್ಟೇಬಲ್ ಸೇರಿ ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version