ಹಾಸನ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸ್ ದಾಳಿ: ಮೊಬೈಲ್, ಗಾಂಜಾ ಸೇರಿದಂತೆ ಹಲವು ವಸ್ತುಗಳು ಪತ್ತೆ! - Mahanayaka

ಹಾಸನ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸ್ ದಾಳಿ: ಮೊಬೈಲ್, ಗಾಂಜಾ ಸೇರಿದಂತೆ ಹಲವು ವಸ್ತುಗಳು ಪತ್ತೆ!

hasana
19/08/2023

ಹಾಸನ: ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರು ತಡ ರಾತ್ರಿ ದಿಢೀರ್ ದಾಳಿ ನಡೆಸಿದ ಘಟನೆ ನಡೆದಿದ್ದು, ದಾಳಿಯ ವೇಳೆ 17 ಮೊಬೈಲ್ , ಚಾರ್ಜರ್, ಗಾಂಜಾ, ಬೀಡಿ ಹಾಗೂ ಸಿಗರೇಟ್ ವಶಪಡಿಸಿಕೊಂಡಿದ್ದಾರೆ.
ಹಾಸನ ನಗರ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದ ಮೇಲೆ ದಾಲಿ ನಡೆಸಿದ ಪೊಲೀಸರು ಮುಂಜಾನೆವರೆಗೂ ಜೈಲಿನ ಕೊಠಡಿಗಳನ್ನು ಶೋಧ ನಡೆಸಿದ್ದಾರೆ.

ಎಸ್.ಪಿ.ಹರಿರಾಂ ಶಂಕರ್, ಹೆಚ್ಚುವರಿ ಎಸ್.ಪಿ.ತಮ್ಮಯ್ಯ ಹಾಗೂ ಇನ್ಸ್ ಪೆಕ್ಟರ್ ರೇವಣ್ಣ ನೇತೃತ್ವದ 60 ಪೊಲೀಸ್ ಅಧಿಕಾರಿಗಳ ತಂಡ ನಡೆಸಿದ ಕಾರ್ಯಾಚರಣೆ ವೇಳೆ ಜೈಲಿನಲ್ಲಿದ್ದ ಆರೋಪಿಗಳ ಬಳಿಯಲ್ಲಿ ಒಟ್ಟು 6 ಆ್ಯಂಡ್ರಾಯ್ಡ್ ಮೊಬೈಲ್ ಗಳು, 11 ಬೇಸಿಕ್ ಮೊಬೈಲ್ ಗಳು ಹಾಗೂ ಗಾಂಜಾ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜೈಲಿನೊಳಗೆ ಗಾಂಜಾ ಪೂರೈಕೆಯಾಗಿದ್ದು ಹೇಗೆ? ಜೊತೆಗೆ ಕೆಲವು ಆರೋಪಿಗಳ ಬಳಿಯಲ್ಲಿ ಚಾಕು ಕೂಡ ಪತ್ತೆಯಾಗಿದ್ದು, ಇಂತಹ ವಸ್ತುಗಳು ಜೈಲಿನೊಳಗೆ ಸೇರಿದ್ದು ಹೇಗೆ? ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಇದೀಗ ತನಿಖೆ ನಡೆಯುತ್ತಿದೆ.

 

ಇತ್ತೀಚಿನ ಸುದ್ದಿ