ಪೊಲೀಸರ ರೈಫಲ್‌ ಗಳ ಬಿಗಿ ಭದ್ರತೆಯೊಂದಿಗೆ ದೇವಸ್ಥಾನಕ್ಕೆ ಪ್ರವೇಶಿಸಿದ ದಲಿತ ಮಹಿಳೆಯರು! - Mahanayaka
2:15 AM Wednesday 11 - December 2024

ಪೊಲೀಸರ ರೈಫಲ್‌ ಗಳ ಬಿಗಿ ಭದ್ರತೆಯೊಂದಿಗೆ ದೇವಸ್ಥಾನಕ್ಕೆ ಪ್ರವೇಶಿಸಿದ ದಲಿತ ಮಹಿಳೆಯರು!

dalith
29/05/2022

ಯಾದಗಿರಿ:  ದೇವಸ್ಥಾನಕ್ಕೆ ದಲಿತ ಹಿಂದೂ ಮಹಿಳೆಯರು ಪ್ರವೇಶಿಸ ಬಾರದು ಎಂದು ಸ್ವಧರ್ಮೀಯರೇ ಅಡ್ಡಿಪಡಿಸುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ  ಪೊಲೀಸ್ ಬಂದೋಬಸ್ತ್ ನೊಂದಿಗೆ ದಲಿತ ಮಹಿಳೆಯರು ದೇವಸ್ಥಾನಕ್ಕೆ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ.

ಕೆಂಭಾವಿ ಪೊಲೀಸ್‌ ಠಾಣಾ ವ್ಯಾಪ್ತಿಯ ಅಂಬಲೀಹಾಳ್‌ ಗ್ರಾಮದಲ್ಲಿ ಐವರು ದಲಿತ ಮಹಿಳೆಯರು ಪೊಲೀಸ್‌ ಬಿಗಿ ಭದ್ರತೆಯಲ್ಲಿ ಆಂಜನೇಯ ದೇವಸ್ಥಾನ ಪ್ರವೇಶಿಸಿ ಪೂಜೆ ಸಲ್ಲಿಸಿದ್ದು,  ದೇವಸ್ಥಾನಕ್ಕೆ ದಲಿತರ ಪ್ರವೇಶ ಮಾಡುವುದಕ್ಕೆ ಪಕ್ಕದ ಹೂವಿನಹಳ್ಳಿ ಗ್ರಾಮದ ಹಿಂದೂಗಳಿಂದ ವಿರೋಧ ವ್ಯಕ್ತವಾಗಿತ್ತು.

ಶನಿವಾರ ಮಧ್ಯಾಹ್ನ ಪೊಲೀಸ್‌ ಜೀಪಿನಲ್ಲಿ, ರೈಫಲ್‌ ಗಳ ಬಿಗಿ ಭದ್ರತೆಯೊಂದಿಗೆ ಬಂದು ಐವರು ದಲಿತ ಮಹಿಳೆಯರು ದೇಗುಲ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ. ಮತ್ತದೇ ಜೀಪಿನಲ್ಲಿ ದಲಿತ ಮಹಿಳೆಯರನ್ನು ಊರಿಗೆ ಕರೆದೊಯ್ದು ಬಿಡಲಾಯಿತು.

ಸ್ವಾತಂತ್ರ್ಯ ದೊರೆತು ಹಲವು ವರ್ಷಗಳಾದರೂ ಇನ್ನೂ ದಲಿತರನ್ನು ಹಿಂದೂಗಳು ಶೋಷಣೆ ಮಾಡುತ್ತಲೇ ಇದ್ದಾರೆ. ಬಿಜೆಪಿ ಹಾಗೂ ಸಂಘ ಪರಿವಾರ ಹಿಂದೂಗಳೆಲ್ಲರೂ ಒಂದೇ ಎಂದು ಹೇಳಿಕೆ ನೀಡಿದರೂ, ಅಸ್ಪೃಶ್ಯತೆ ವಿರುದ್ಧ ಧ್ವನಿಯೆತ್ತದೇ ಮೌನವಾಗಿವೆ. ಹಿಂದೂಗಳು ಎಂದು ಹೇಳಿ ಕೊಳ್ಳುವ ದಲಿತರು ಇಂದು ರೈಫಲ್ ಗಳ ಭದ್ರತೆಯಲ್ಲಿ ದೇವಸ್ಥಾನಕ್ಕೆ ಪ್ರವೇಶಿಸುವ ಸ್ಥಿತಿ ಇದೆ ಎಂದರೆ, ದಲಿತರು ಎಷ್ಟರ ಮಟ್ಟಿಗೆ ಈ ದೇಶದಲ್ಲಿ ಸ್ವತಂತ್ರರು ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ತ್ಯಾಜ್ಯ ವಸ್ತುಗಳಿಂದ ತಲೆಯೆತ್ತಿದ ದೈತ್ಯ ರಾಜಹಂಸ ಪ್ರತಿಮೆ!

ಕೆಜಿಎಫ್ ಚಿತ್ರದ ಪ್ರಭಾವದಿಂದ ಸಿಗರೇಟ್ ಸೇದಿದ ಬಾಲಕ ಅಸ್ವಸ್ಥ

100 ವರ್ಷಗಳಷ್ಟು ಹಳೆಯ ಮಸೀದಿಗಳ ರಹಸ್ಯ ಸಮೀಕ್ಷೆಗೆ  ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ

ಬಡ ಎಸ್ಸಿ-ಎಸ್ ಟಿ ಕುಟುಂಬಗಳಿಗೆ ಉಚಿತ ವಿದ್ಯುತ್: ಬಿಜೆಪಿ ಸರ್ಕಾರ ಆದೇಶ

ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಕೊಲೆ: ಕಠಿಣ ಶಿಕ್ಷೆ ಕೊಡಿಸುತ್ತೇವೆ: ಸಚಿವ ಮುರುಗೇಶ್ ನಿರಾಣಿ

ಇತ್ತೀಚಿನ ಸುದ್ದಿ