ಕರ್ತವ್ಯಕ್ಕೆ ಮೈಸೂರಿಗೆ ಹೋಗುವುದಾಗಿ ಹೇಳಿ ಹೋಗಿದ್ದ ಪೊಲೀಸ್ ಪೇದೆ ನಾಪತ್ತೆ
ಕರ್ತವ್ಯಕ್ಕೆ ಮೈಸೂರಿಗೆ ಹೋಗುತ್ತೇನೆ ಎಂದು ಹೇಳಿ ನನ್ನ ಮಗ ಕಳೆದ 28 ದಿನಗಳಿಂದ ಕಾಣೆಯಾಗಿದ್ದಾರೆ ಮಗನ ಹುಡುಕಿಕೊಡುವಂತೆ ತಂದೆ ಕೆ.ಪಿ.ಗೋವಿಂದಯ್ಯ ರಾಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹನೂರು ತಾಲೂಕಿನ ಕೂಡ್ಲೂರು ಗ್ರಾಮದ ಗೋವಿಂದಯ್ಯರವರ ಎರಡನೇ ಮಗ ಸತೀಶ್ ಕುಮಾರ್ ಕೆಎಸ್ಆರ್ ಪಿ ನಲ್ಲಿ ಪೊಲೀಸ್ ಪೇದೆ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು , ಸ್ವಗ್ರಾಮ ಕೂಡ್ಲೂರಿಗೆ ಬಂದು ಜೂನ್ 2 ರಂದು ಕರ್ತವ್ಯಕ್ಕೆ ಮೈಸೂರಿಗೆ ಹೋಗುತ್ತೇನೆ ಎಂದು ಹೇಳಿ ಹೋದವನು ಇಲ್ಲಿಯವರೆಗೆ ಯಾವುದೇ ಸಂಪರ್ಕವಿಲ್ಲದೆ ಎಲ್ಲಿದ್ದಾನೆ ಎಂದು ತಿಳಿದಿರುವುದಿಲ್ಲ ನಾವು ನಮ್ಮ ಸಂಬಂಧಿಕರು ಹಾಗೂ ಸ್ನೇಹಿತರು ಹಿತೈಷಿಗಳ ಮನೆಯಲೆಲ್ಲ ಹುಡುಕಿ ನೋಡಿದರು ಅವನ ಇರುವುದಕ್ಕೆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಆದ್ದರಿಂದ ಕಾಣೆಯಾದ ನನ್ನ ಮಗ ಸತೀಶ್ ಕುಮಾರ್ ಅವರನ್ನು ಪತ್ತೆ ಮಾಡಿಕೊಡುವಂತೆ ದೂರು ನೀಡಿದ್ದಾರೆ.
ಸತೀಶ್ ಕುಮಾರ್ ಕನ್ನಡ ತಮಿಳು ತೆಲುಗು ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಈ ಪೇದೆಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ರಾಮಪುರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08225295234,9480804657 ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ತಿಳಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw