ಪೊಲೀಸರಿಗೆ ಹೆದರಿ ಟಿಡಿಪಿ ಕಾರ್ಯಕರ್ತ ಆತ್ಮಹತ್ಯೆ
ಆಂಧ್ರಪ್ರದೇಶ: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಮಂದಾಸ ಮಂಡಲ ಪೊತ್ತಂಗಿಯಲ್ಲಿ ಪೊಲೀಸರಿಗೆ ಹೆದರಿ ತೆಲುಗುದೇಶಂ ಕಾರ್ಯಕರ್ತ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೋನ ವೆಂಕಟರಾವ್ ಆತ್ಮಹತ್ಯೆ ಮಾಡಿಕೊಂಡಿ ಟಿಡಿಪಿ ಕಾರ್ಯಕರ್ತ. ಆಡಳಿತ ಪಕ್ಷದ ನಾಯಕರನ್ನು ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ವೆಂಕಟರಾವ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಸೋಮವಾರ ಮಧ್ಯಾಹ್ನ ಇಬ್ಬರು ಕಾನ್ಸ್ಟೇಬಲ್ಗಳು ವಿಚಾರಣೆಗಾಗಿ ವೆಂಕಟರಾವ್ ಮನೆಗೆ ತೆರಳಿದ್ದರು. ಆ ವೇಳೆ ವೆಂಕಟರಾವ್ ಇಚ್ಛಾಪುರದಲ್ಲಿ ಇರುವುದನ್ನು ತಿಳಿದುಕೊಂಡು ದೂರವಾಣಿ ಮೂಲಕ ಮಾತನಾಡಿದ್ದರು ಎಂದು ಪತ್ನಿ ಕೃಷ್ಣಕುಮಾರಿ ತಿಳಿಸಿದ್ದಾರೆ.
ಕೆಲವು ಗಂಟೆಗಳ ನಂತರ ಇಚ್ಚಾಪುರದಿಂದ ಮನೆಗೆ ಬಂದ ವೆಂಕಟರಾವ್, ಪೊಲೀಸರು ಹಾಗೂ ಆಡಳಿತ ಪಕ್ಷದ ಮುಖಂಡರ ಭಯದಿಂದ ಜಮೀನಿಗೆ ತೆರಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಷ್ಯಾ ಭಯೋತ್ಪಾದಕ ದೇಶ ಎಂದು ಘೋಷಿಸಿ: ಬ್ರಿಟನ್ ಸಂಸತ್ತಿಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಮನವಿ
ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದ ಪಾಕ್ ಯುವತಿ
ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ
ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ: ಮಗ – ತಂದೆ ಇಬ್ಬರೂ ಸಾವಿಗೆ ಶರಣು\’