ಪದೇ ಪದೇ ನಿಯಮ ಉಲ್ಲಂಘಿಸಿದ ಕಾರು ಚಾಲಕನಿಗೆ 3 ಮೀಟರ್ ಉದ್ದದ ರಶೀದಿ ನೀಡಿದ ಪೊಲೀಸರು
19/10/2024
ಶಿವಮೊಗ್ಗ: ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸಿದ ಕಾರು ಚಾಲಕನಿಗೆ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸರು ಮೂರು ಮೀಟರ್ ಉದ್ದದ ಬಿಲ್ ನೀಡಿದ್ದಾರೆ. ಬಳಿಕ 11,000 ರೂ, ದಂಡ ಕಟ್ಟಿಸಿಕೊಂಡಿರುವ ಘಟನೆ ನಡೆದಿದೆ.
ಶಿವಪ್ಪನಾಯಕ ವೃತ್ತದ ಬಳಿ ವಾಹನ ತಪಾಸಣೆ ವೇಳೆ ಈ ಘಟನೆ ನಡೆದಿದೆ. ಕಾರೊಂದನ್ನು ತಡೆದು ಪರಿಶೀಲನೆ ನಡೆಸಿದ ವೇಳೆ ಕಾರು ಚಾಲಕ ಹಲವು ಕಡೆ ಸಂಚಾರ ನಿಯಮ ಉಲ್ಲಂಘಿಸಿರುವುದು ತಿಳಿದು ಬಂದಿದೆ. ಹೀಗಾಗಿ ಕಾರು ಚಾಲಕನಿಗೆ ದಂಡ ವಿಧಿಸಲಾಗಿದ್ದು, ಅತೀ ದೊಡ್ಡ ಬಿಲ್ ನೀಡಲಾಗಿದೆ.
ನಿಯಮ ಉಲ್ಲಂಘಿಸಿದ ಕಾರು ಚಾಲಕ ಈ ದೊಡ್ಡ ಮೊತ್ತದ ದಂಡವನ್ನು ಕೊನೆಗೂ ಪಾವತಿಸಿದ್ದಾನೆ. ದಂಡ ಕಟ್ಟಿದ ಬಳಿಕ ಚಾಲಕನನ್ನು ಪೊಲೀಸರು ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: