ಕದ್ದ ಮಾಲನ್ನ ಕೊಂಡುಕೊಳ್ಳಬೇಡಿ: ಕಾಫಿನಾಡಲ್ಲಿ ಪೊಲೀಸರಿಂದ ವಿಶೇಷ ಅಭಿಯಾನ - Mahanayaka

ಕದ್ದ ಮಾಲನ್ನ ಕೊಂಡುಕೊಳ್ಳಬೇಡಿ: ಕಾಫಿನಾಡಲ್ಲಿ ಪೊಲೀಸರಿಂದ ವಿಶೇಷ ಅಭಿಯಾನ

coffe
13/01/2025

ಕೊಟ್ಟಿಗೆಹಾರ: ಕಾಫಿನಾಡಲ್ಲಿ ಪೊಲೀಸರಿಂದ ಅಭಿಯಾನ ಆರಂಭವಾಗಿದ್ದು, ಕದ್ದ ಮಾಲನ್ನ ಕೊಂಡುಕೊಳ್ಳಬೇಡಿ ಎಂದು ಅಭಿಯಾನ ಆರಂಭಗೊಂಡಿದೆ.

ಕಾಫಿತೋಟದ ಮಾಲೀಕರ ಜೊತೆ ಪೊಲೀಸರು ಅಭಿಯಾನ ನಡೆಸುತ್ತಿದ್ದಾರೆ. ಇದರ ಅಂಗವಾಗಿ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.
ಮಲೆನಾಡಲ್ಲಿ ಎಗ್ಗಿಲ್ಲದೆ ನಡೆಯುತ್ತಿರೋ ಕಾಫಿ ಕಳ್ಳತನ ನಡೆಯುತ್ತಿದೆ. ಹಸಿ ಕಾಫಿಯನ್ನೂ ಕದ್ದು ಮದು ಮಾರ್ತಿರೋ ಘಟನೆ ನಡೆಯುತ್ತಿದೆ. ಗಿಡದ ರೆಂಬೆಗಳ ಸಮೇತ ಕಾಫಿ ಕದ್ದು ಕಳ್ಳರು ಮಾರಾಟ ಮಾಡುತ್ತಿದ್ದಾರೆ.

ಮನೆ ಮುಂದೆ ಒಣಹಾಕಿದ್ದ ಕಾಫಿಯನ್ನೂ ಕದ್ದು ಎಲ್ಲೆಂದರಲ್ಲಿ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಕದ್ದ ಮಾಲನ್ನ ಕೊಂಡುಕೊಳ್ಳಬೇಡಿ ಎಂದು ಪೊಲೀಸರ ಅಭಿಯಾನ ಆರಂಭಿಸಿದ್ದಾರೆ. ಅಂಗಡಿಗಳಿಗೆ ಹೋಗಿ ಪೊಲೀಸರು, ಕಾಫಿತೋಟದ ಮಾಲೀಕರು ಜಾಗೃತಿ ಮೂಡಿಸುತ್ತಿದ್ದಾರೆ.


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ