ಪುಸ್ತಕಾಲಯಕ್ಕೆ ಪೊಲೀಸರ ದಾಳಿ: 668 ಪುಸ್ತಕಗಳು ವಶಕ್ಕೆ

ಕಾಶ್ಮೀರದ ಪೊಲೀಸರು ಪುಸ್ತಕಾಲಯಕ್ಕೆ ದಾಳಿ ಮಾಡಿ ಸುಮಾರು 668 ಪುಸ್ತಕಗಳನ್ನ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮುಖ್ಯವಾಗಿ ದೆಹಲಿ ಮೂಲದ ಮರ್ಕಝೀ ಮಕ್ತಬ ಇಸ್ಲಾಮಿಯ ಪ್ರಕಟಿಸಿರುವ ಪುಸ್ತಕಗಳನ್ನೇ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ . ಗುಪ್ತಚರ ಇಲಾಖೆಯ ಮಾಹಿತಿಯಂತೆ ತಾವು ಈ ದಾಳಿ ನಡೆಸಿದ್ದೇವೆ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.
ವಶಪಡಿಸಿಕೊಳ್ಳಲಾದ ಹೆಚ್ಚಿನ ಪುಸ್ತಕಗಳು ಮೌಲಾನ ಮೌದೂದಿ ಅವರಿಗೆ ಸೇರಿದ್ದಾಗಿದೆ ಎಂದು ಎಪಿ ನ್ಯೂಸ್ ವರದಿ ಮಾಡಿದೆ.
ಶ್ರೀನಗರದಲ್ಲಿ ಪೊಲೀಸರು ಈ ದಾಳಿ ನಡೆಸಿದ್ದಾರೆ. ಈ ಕುರಿತಂತೆ ಪೊಲೀಸರು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಿಷೇಧಿತ ಸಂಘಟನೆಯ ವಿಚಾರಧಾರೆಯನ್ನು ಪ್ರಚಾರ ಮಾಡಲಾಗುತ್ತಿರುವುದಕ್ಕಾಗಿ ನಾವು ಈ ದಾಳಿಯನ್ನು ನಡೆಸಿದ್ದೇವೆ ಎಂಬ ಅರ್ಥ ಬರುವ ರೀತಿಯಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾಶ್ಮೀರದ ಜಮಾಅತೆ ಇಸ್ಲಾಮಿಯನ್ನು 2019 ರಲ್ಲಿ ನಿಷೇಧಿಸಲಾಗಿದೆ. ಜಮಾಅತೆ ಇಸ್ಲಾಮಿ ಕಾಶ್ಮೀರವು ಪ್ರತ್ಯೇಕ ಘಟಕವಾಗಿದ್ದು ಅದಕ್ಕೂ ಜಮಾಅತೆ ಇಸ್ಲಾಮಿ ಹಿಂದ್ ಗೂ ಸಂಬಂಧವಿಲ್ಲ ಅನ್ನುವುದನ್ನು ಈ ಮೊದಲೇ ತಿಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj