ಸಮನ್ಸ್ ನೀಡಲು ಬಂದ ಪೊಲೀಸ್ ಕಾನ್ ಸ್ಟೇಬಲ್ ನಿಂದ ಬಾಲಕಿಯ ಅತ್ಯಾಚಾರ - Mahanayaka
4:10 PM Wednesday 5 - February 2025

ಸಮನ್ಸ್ ನೀಡಲು ಬಂದ ಪೊಲೀಸ್ ಕಾನ್ ಸ್ಟೇಬಲ್ ನಿಂದ ಬಾಲಕಿಯ ಅತ್ಯಾಚಾರ

shivaraj kadaba police
27/09/2021

ಕಡಬ: ಸಮನ್ಸ್ ನೀಡಲು ಬಂದ ಪೊಲೀಸ್ ಸಿಬ್ಬಂದಿಯೋರ್ವ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ದೈಹಿಕವಾಗಿ ಬಳಸಿಕೊಂಡು ಗರ್ಭಿಣಿಯನ್ನಾಗಿಸಿದ ಆರೋಪವೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

2 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಲು ಬಂದಿದ್ದ ಪೊಲೀಸ್ ಕಾನ್ ಸ್ಟೇಬಲ್ ಶಿವರಾಜ್ ಎಂಬಾತ ಸಂತ್ರಸ್ತೆಯ ಕುಟುಂಬಕ್ಕೆ ಪರಿಚಯವಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ಸಮನ್ಸ್ ಕೊಡುವ ನೆಪದಲ್ಲಿ ಮನೆಗೆ ಶಿವರಾಜ್ ಸಂತ್ರಸ್ತೆಯ ಮನೆಗೆ ಆಗಾಗ ಬರುತ್ತಿದ್ದು, ಪ್ರಕರಣ ಮುಗಿದಿದ್ದರೂ ಆತ ಮನೆಗೆ ಬರುತ್ತಿದ್ದ ಎಂದು ಹೇಳಲಾಗಿದ್ದು, ಇದೇ ಸಂದರ್ಭದಲ್ಲಿ ಸಂತ್ರಸ್ತೆಯ ಮೇಲೆ ಶಿವರಾಜ್ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಇತ್ತೀಚೆಗೆ ಯುವತಿಯಲ್ಲಿ ದೈಹಿಕ ಬದಲಾವಣೆ ಕಂಡುಬಂದಿದ್ದು ಪೋಷಕರು ಮಗಳನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸಂತ್ರಸ್ತೆ ತನಗೆ ಐದೂವರೆ ತಿಂಗಳಾಗಿದ್ದು, ಶಿವರಾಜ್​ ನಿಂದಾಗಿ ತಾನು ಗರ್ಭಿಣಿಯಾಗಿದ್ದಾಗಿ ತಿಳಿಸಿದ್ದಾಳೆ. ವಿಷಯ ತಿಳಿದ ಪೋಷಕರು ಕಾನ್ಸ್ಟೇಬಲ್ ಶಿವರಾಜ್​ ಕರೆಸಿ ಪ್ರಶ್ನಿಸಿದಾಗ ಹಣ ಕೊಡುತ್ತೇನೆ ಅಬಾರ್ಷನ್ ಮಾಡಿಸುವಂತೆ ಆತ ಹೇಳಿದ್ದ. ಇದನ್ನು ಸಂತ್ರಸ್ತೆಯ ತಂದೆ ನಿರಾಕರಿಸಿದ್ದರು.

ಆದರೆ ಸೆಪ್ಟೆಂಬರ್ 18ರಿಂದ ಯುವತಿ ಮತ್ತು ತಾಯಿ ನಾಪತ್ತೆಯಾಗಿದ್ದು, ಆಸ್ಪತ್ರೆಗೆ ಹೋಗುವುದಾಗಿ ಹೇಳಿ ತೆರಳಿದ್ದ ತಾಯಿ, ಮಗಳು ಮರಳಿ ಮನೆಗೆ ಬಂದಿಲ್ಲ. ಕಾನ್ಸ್​ಟೇಬಲ್ ಶಿವರಾಜ್ ಆನ್​ಲೈನ್​ 35,000 ಟ್ರಾನ್ಸ್​ಫರ್ ಮಾಡಿ ಅಬಾರ್ಷನ್ ಮಾಡಿಸುವಂತೆ ಹೇಳಿದ್ದು, ಅಂತೆಯೇ ಮಾಡಿಸಿರುವುದಾಗಿ ಯುವತಿಯ ತಾಯಿ ಫೋನ್ ಮೂಲಕ ತಿಳಿಸಿದ್ದಾಳೆ ಎನ್ನಲಾಗಿದೆ. ಆದರೆ ಎಲ್ಲಿ ವಾಸವಿದ್ದೇವೆ ಎಂದು ಅವರು ತಿಳಿಸಿಲ್ಲ. ಪಿ.ಸಿ ಶಿವರಾಜ್ ಕೂಡ ತಲೆಮರೆಸಿಕೊಂಡಿದ್ದಾನೆ ಎಂಬುದಾಗಿ ಯುವತಿಯ ತಂದೆ ನೀಡಿರುವ ದೂರಿನಲ್ಲಿ  ತಿಳಿಸಲಾಗಿದೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಶಾಕಿಂಗ್ ನ್ಯೂಸ್: ಸೈಬರ್ ಸೆಂಟರ್ ನಲ್ಲಿ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ

ಜೆಡಿಎಸ್ ನ್ನು ಸಿದ್ದರಾಮಯ್ಯ ಮಾತ್ರವಲ್ಲ, ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ | ಹೆಚ್.ಡಿ.ದೇವೇಗೌಡ ಗುಡುಗು

ಚೆಕಪ್ ಗೆ ಹೋದ ಮಹಿಳೆಯ ವಸ್ತ್ರ ಕಳಚಿ ಲೈಂಗಿಕ ಕಿರುಕುಳ | ವೈದ್ಯ ಅರೆಸ್ಟ್

ಬೆಂಗಳೂರಿನ ಪ್ಲೈಓವರ್ ಮೇಲೆ ಮತ್ತೊಂದು ಭೀಕರ ಅಪಘಾತ | ಯುವಕ, ಯುವತಿಯ ದಾರುಣ ಸಾವು

ಭಾರತ್ ಬಂದ್: ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಸಾವಿರಾರು ವಾಹನಗಳು

ಪ್ರತಿಭಟನಾಕಾರರನ್ನು ನಿಯಂತ್ರಿಸುತ್ತಿದ್ದ ಡಿಸಿಪಿಯ ಕಾಲಿನ ಮೇಲೆ ಹರಿದ ಕಾರು!

ಬೆಂಗಳೂರಿನ ಪ್ಲೈಓವರ್ ಮೇಲೆ ಮತ್ತೊಂದು ಭೀಕರ ಅಪಘಾತ | ಯುವಕ, ಯುವತಿಯ ದಾರುಣ ಸಾವು

ಇತ್ತೀಚಿನ ಸುದ್ದಿ