ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ಯುವಕನ ಮೇಲೆ 6 ಮಂದಿಯಿಂದ ಹಲ್ಲೆ! - Mahanayaka
1:16 PM Wednesday 5 - February 2025

ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ಯುವಕನ ಮೇಲೆ 6 ಮಂದಿಯಿಂದ ಹಲ್ಲೆ!

devedurga
04/09/2021

ರಾಯಚೂರು:  ಕುಡಿದ ಮತ್ತಿನಲ್ಲಿ ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದದಲ್ಲಿ ಬೈದಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೋರ್ವನಿಗೆ ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ 6 ಮಂದಿಯ ತಂಡವೊಂದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ದೇವದುರ್ಗ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆದಿದೆ.

ಘಟನೆ ಹಿನ್ನೆಲೆಯಲ್ಲಿ 6 ಮಂದಿಯ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಮಾಪತಿ, ಮಲ್ಲಿಕಾರ್ಜುನ, ವೆಂಕಟ ರೆಡ್ಡಿ, ಚಂದ್ರಶೇಖರ್ ಪ್ರಕಾಶ್ ಹಾಗೂ ಸುರೇಶ್ ಎಂಬವರು ಹಲ್ಲೆ ನಡೆಸಿದವರು ಎಂದು ಹೇಳಲಾಗಿದ್ದು, ಇವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕುಡಿದ ಮತ್ತಿನಲ್ಲಿ ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಆರೋಪಿಸಿದ್ದ ಆರೋಪಿಗಳು ಯುವಕನಿಗೆ ಠಾಣೆಯ ಮುಂಭಾಗದಲ್ಲಿಯೇ ಹಲ್ಲೆ ನಡೆಸಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ, ಪೊಲೀಸರು ಮಾತ್ರ ಆ ಕಡೆಗೆ ತಲೆಯೇ ಹಾಕಿರಲಿಲ್ಲ ಎನ್ನಲಾಗಿದೆ. ಈ ವೇಳೆ ಸಾರ್ವಜನಿಕರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಈ ವೇಳೆ ಎಚ್ಚೆತ್ತ  ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

ಹುಡುಗಿಯರನ್ನು ಚುಡಾಯಿಸಿದ್ದಕ್ಕೆ ಸಾರಿಗೆ ಬಸ್ ನಲ್ಲಿಯೇ ಯುವಕನಿಗೆ ಹಿಗ್ಗಾಮುಗ್ಗಾ ಹಲ್ಲೆ!

ಆನ್ ಲೈನ್ ಜೂಜು ನಿಷೇಧಕ್ಕೆ ರಾಜ್ಯ ಸರ್ಕಾರ ತೀರ್ಮಾನ | ಸಚಿವ ಮಾಧುಸ್ವಾಮಿ

ಅಫ್ಘಾನಿಸ್ತಾನದ ಮಾಜಿ ಅಧಿಕಾರಗಳ ಇಮೇಲ್ ಗಳನ್ನು ಲಾಕ್ ಮಾಡಿದ ಗೂಗಲ್!

ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ವಾಹನಗಳನ್ನು ತಡೆದ ಯುವತಿ | “ಏನಾಯ್ತಮ್ಮಾ…” ಎಂದು ಕೇಳಲು ಹೋದವರಿಗೆ ಅವಾಚ್ಯ ಬೈಗುಳ!

ಹಾಸ್ಟೆಲ್ ನ ರಹಸ್ಯ ಮುಚ್ಚಿ ಹಾಕಲು ಅತ್ಯಾಚಾರದ ಕಥೆ ಕಟ್ಟಿದ ವಿದ್ಯಾರ್ಥಿನಿ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ರದ್ದಾಗಲಿ | ಸಿಪಿಐ(ಎಂ) ಒತ್ತಾಯ

ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

ಇತ್ತೀಚಿನ ಸುದ್ದಿ