ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಆಚರಿಸುವ ಹಬ್ಬ ದೀಪಾವಳಿ | ಪಿಎಸ್ ಐ ಮೇಟಿ
ಚನ್ನಗಿರಿ: ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರೊಂದಿಗೆ ಈ ಬಾರಿ ಪೋಲಿಸ್ ಠಾಣೆಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನು ಠಾಣೆಯ ಪಿಎಸ್ ಐ ಶಿವರುದ್ರಪ್ಪ ಎಸ್. ಮೇಟಿ ರವರು ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ಸಿಹಿಯನ್ನು ಹಂಚಿ ದೀಪಾವಳಿ ಆಚರಿಸಲಾಯಿತು.
ಈ ಹಬ್ಬವು ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಆಚರಿಸುವ ದೀಪಾವಳಿ ಹಬ್ಬವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಕಳೆದ ವರ್ಷ ಎಲ್ಲಾ ಯುವಕರು ಪಟಾಕಿಯನ್ನು ಸಿಡಿಸಿ ಸಂಭ್ರಮದಿಂದ ಆಚರಿಸುತಿದ್ದರು . ಈ ಪಟಾಕಿಯಿಂದಾಗಿ ಸಾಕಷ್ಟು ಜನ ಯುವಕರು ತೊಂದರೆಗಳನ್ನು ಅನುಭವಿಸಿರುವುದನ್ನು ನೋಡಿದ್ದೇವೆ . ಈ ವರ್ಷ ಕೊರೋನ ಮಹಾಮಾರಿ ರೋಗವು ದೇಶದೆಲ್ಲೆಡೆ ಆವರಿಸಿ ಮನುಕುಲವೆ ನಲುಗಿ ಹೋಗಿದೆ ಹಾಗಾಗಿ ಈ ಭಾರಿ ಪಟಾಕಿಯ ಹೊಗೆಯಿಂದಲೂ ಕೂಡ ನಾನ ರೀತಿಯ ರೋಗವು ಬರಬಹುದಾಗಿದೆ ಎಂದು ರಾಜ್ಯ ಸರ್ಕಾರ ಪಟಾಕಿಯನ್ನು ನಿಷೇದಿಸಲಾಗಿದೆ . ಹಸಿರು ಪಟಾಕಿಯನ್ನು ಹಾರಿಸುವ ಮೂಲಕ ಮಕ್ಕಳು ಯುವಕರು ದೀಪಾವಳಿ ಹಬ್ಬವನ್ನು ಆಚರಿಬೇಕು ಎಂದರು ಎಂದು ಅವರು ತಿಳಿಸಿದರು.