ಪೊಲೀಸ್ ವಾಹನದ ಮೇಲೆ ಟಿಪ್ಪರ್ ಪಲ್ಟಿ | ಮರಳಿನಡಿಗೆ ಸಿಲುಕಿ ಹೆಡ್ ಕಾನ್ಸ್ ಟೇಬಲ್ ಸಾವು - Mahanayaka

ಪೊಲೀಸ್ ವಾಹನದ ಮೇಲೆ ಟಿಪ್ಪರ್ ಪಲ್ಟಿ | ಮರಳಿನಡಿಗೆ ಸಿಲುಕಿ ಹೆಡ್ ಕಾನ್ಸ್ ಟೇಬಲ್ ಸಾವು

nanjanaguru
27/04/2021

ಮೈಸೂರು: ವಾಹನ ತಪಾಸಣೆಯ ವೇಳೆ ಮರಳು ತುಂಬಿದ ಲಾರಿಯೊಂದು ಇಂಟರ್ಸೆಪ್ಟರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲಿದ್ದ ಮರಳು ಇಂಟರ್ಸೆಪ್ಟರ್ ವಾಹನದ ಮೇಲೆ ಬಿದ್ದಿದ್ದು, ವಾಹನದೊಳಗೆ ಸಿಲುಕಿದ ಹೆಡ್ ಕಾನ್ಸ್ ಟೇಬಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

35 ವರ್ಷ ವಯಸ್ಸಿನ ಸಿದ್ದರಾಜನಾಯಕ ಮೃತಪಟ್ಟ ಪೊಲೀಸ್ ಅಧಿಕಾರಿಯಾಗಿದ್ದಾರೆ.  ನಂಜನಗೂಡು ತಾಲೂಕಿನ ಮುದ್ದಹಳ್ಳಿ ಗೇಟ್ ಬಳಿಯಲ್ಲಿ ಈ ದುರ್ಘಟನೆ ನಡೆದಿದ್ದಿದೆ. ಮರುಳು ವಾಹನ ಬರುತ್ತಿದ್ದಂತೆ ವಾಗನ ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ವಾಹನ ನಿಲ್ಲಿಸುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಇಂಟರ್ಸೆಪ್ಟರ್ ವಾಹನಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಲಾರಿಯಲ್ಲಿದ್ದ ಎಂ ಸ್ಯಾಂಡ್  ಪೊಲೀಸ್ ವಾಹನದ ಮೇಲೆ ಬಿದ್ದಿದ್ದು, ಈ ವೇಳೆ ವಾಹನದೊಳಗಿದ್ದ ಮರಳಿನಡಿಯಲ್ಲಿ ಸಿದ್ದರಾಜನಾಯಕ ಸಿಲುಕಿ ಮೃತಪಟ್ಟಿದ್ದಾರೆ.

ಘಟನೆ ನಡೆದ ತಕ್ಷಣವೇ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿ